filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.5787303, 0.47147304);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39; 
ನ್ಯೂಸ್

3 ದಿನದಲ್ಲಿ ಮೂವರ ಸಾಕ್ಷಿ ವಿಚಾರಣೆ

ಚಿತ್ರದುರ್ಗ: ಶಿವಮೂರ್ತಿ ಮುರುಘಾ ಶರಣರ ಮೇಲಿನ ಮೊದಲ ಪೋಕ್ಸೋ ಪ್ರಕರಣ ಸಂಬಂಧ ಬುಧವಾರ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 3ನೇ ಮುಖ್ಯ ಸಾಕ್ಷಿ ವಿಚಾರಣೆ ನಡೆಸಿತು.

ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರು ಪೋಕ್ಸೋ ಪ್ರಕರಣದ ಸಾಕ್ಷಿ ವಿಚಾರಣೆಗೆ ಜೂ. 10ರಿಂದ ಅವಕಾಶ ಮಾಡಿಕೊಟ್ಟ ನಂತರ ಸತತ ಮೂರು ದಿನದಲ್ಲಿ ಒಟ್ಟು ಮೂವರ ಸಾಕ್ಷಿ ವಿಚಾರಣೆ ನಡೆಸಿದರು.

ಈ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯಾಗಿರುವ ಬಾಲಕಿಯರಿಂದಲೂ ಇನ್ ಕ್ಯಾಮೆರಾ ಪ್ರಕ್ರಿಯೆ ಮೂಲಕ ವಿಚಾರಣೆ ನಡೆಸಿ, ಸಂತ್ರಸ್ತರಿಂದ ಹೇಳಿಕೆ ದಾಖಲಿಸಿಕೊಳ್ಳಲಾಯಿತು. ಬುಧವಾರ 3ನೇ ಸಾಕ್ಷಿ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದರು. ನ್ಯಾಯಾಧೀಶರ ಮುಂದೆ ಪ್ರಕರಣದ ಆರೋಪಿತರಾದ ಶಿವಮೂರ್ತಿ ಮುರುಘಾ ಶರಣರು, ರಶ್ಮಿ, ಪರಮಶಿವಯ್ಯ ಹಾಜರಾದರು.

ಸರ್ಕಾರಿ ಅಭಿಯೋಜಕ ಜಗದೀಶ್, ಆರೋಪಿತರ ಪರ ವಕೀಲ ಕೆ.ಬಿ.ಕೆ.ಸ್ವಾಮಿ, ವಿಶ್ವನಾಥಯ್ಯ, ಉಮೇಶ್ ಇತರರಿದ್ದರು. ಇದೇ ಪ್ರಕರಣದ ಮುಖ್ಯ ಸಾಕ್ಷಿದಾರರ ವಿಚಾರಣೆಯನ್ನು ಜೂ. 20ಕ್ಕೆ ಮುಂದೂಡಲಾಯಿತು.