BJP: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಗ್ಗೆ ಕುತೂಹಲ ಮೂಡಿದ್ದು, ಯಾರಾಗಲಿದ್ದಾರೆ ಅಧ್ಯಕ್ಷರು? ಎಂಬ ಚರ್ಚೆಗಳು ಸದ್ಯ ರಾಜಕೀಯ ವಲಯದಲ್ಲಿ ಜೋರಾಗಿದೆ. ಜೆ.ಪಿ. ನಡ್ಡಾ ಅವರ ಅಧಿಕಾರಾವಧಿಯ ಎರಡು ವರ್ಷಗಳು ಕಳೆದರೂ, ಹೊಸ ಅಧ್ಯಕ್ಷರನ್ನು ಇನ್ನೂ ಆಯ್ಕೆ ಮಾಡಿಲ್ಲ. ಆದಾಗ್ಯೂ, ಬಿಜೆಪಿ ಮೂಲಗಳಿಂದ ಬಂದಿರುವ ಇತ್ತೀಚಿನ ಮಾಹಿತಿ ಪ್ರಕಾರ, ಜುಲೈ ಎರಡನೇ ವಾರದಲ್ಲಿ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರ ಹೆಸರನ್ನು ಘೋಷಿಸುವ ಸಾಧ್ಯತೆಯಿದೆ.
ಇದರೊಂದಿಗೆ, ಈ ಪ್ರಮುಖ ಹುದ್ದೆ ಯಾರ ಪಾಲಾಗಬಹುದು ಎಂಬ ಪ್ರಶ್ನೆಗಳು ಕಾಡತೊಡಗಿವೆ. ಬಿಜೆಪಿ ಈ ಬಾರಿ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಲು ಯೋಜಿಸಿರುವುದು ಹಲವರ ಹುಬ್ಬೇರಿಸಿದೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ನಾಯಕತ್ವವು ಮೂವರು ಮಹಿಳೆಯರ ಹೆಸರುಗಳನ್ನು ಪರಿಗಣಿಸಿದೆ ಎಂದು ತಿಳಿದುಬಂದಿದೆ. ಈ ಮೂವರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸಂಸದೆ ಪುರಂದೇಶ್ವರಿ ಮತ್ತು ವನತಿ ಶ್ರೀನಿವಾಸನ್ ಹೆಸರುಗಳು ಮುಂಚೂಣಿಯಲ್ಲಿವೆ.
ಇತ್ತೀಚೆಗೆ, ಪಕ್ಷದ ಪ್ರಧಾನ ಕಚೇರಿಯಲ್ಲಿ ಪ್ರಸ್ತುತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಯಾರ ಆಯ್ಕೆ ಉತ್ತಮ ಎಂಬುದನ್ನೂ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಹಿಂದಿರುಗಿದ ಕೂಡಲೇ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ: ತಾಜಾ ಮಾವನ್ನು ತಿನ್ನುವಾಗ ಅರ್ಧದಲ್ಲಿ ಬದಲಾಯ್ತು ರುಚಿ: ಏನೆಂದು ಹಣ್ಣು ನೋಡಿದಾಗ ಕಾದಿತ್ತು ಬಿಗ್ ಶಾಕ್! Mango
ತಮಿಳುನಾಡಿನ ವಕೀಲೆ ಮತ್ತು ಬಿಜೆಪಿ ನಾಯಕಿಯಾಗಿರುವ ವನತಿ ಶ್ರೀನಿವಾಸನ್, ಪ್ರಸ್ತುತ ರಾಜ್ಯ ವಿಧಾನಸಭೆಯಲ್ಲಿ ಕೊಯಮತ್ತೂರು ದಕ್ಷಿಣವನ್ನು ಪ್ರತಿನಿಧಿಸುತ್ತಿದ್ದಾರೆ. 1993ರಲ್ಲಿ ಬಿಜೆಪಿ ಸೇರಿದಾಗಿನಿಂದ, ಅವರು ರಾಜ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ತಮಿಳುನಾಡು ಉಪಾಧ್ಯಕ್ಷೆ ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. 2020ರಲ್ಲಿ, ವನತಿಯವರನ್ನು ಪಕ್ಷದ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2022ರಲ್ಲಿ, ಅವರು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರಾಗಿದ್ದರು. ಈ ಹಿನ್ನಲೆ ಅಧ್ಯಕ್ಷರ ಆಯ್ಕೆ ಪಟ್ಟಿಯಲ್ಲಿ ಅವರ ಹೆಸರು ಕೂಡ ಕೇಳಿಬಂದಿದೆ.
ಆಂಧ್ರಪ್ರದೇಶದ ರಾಜಮಂಡ್ರಿ ಬಿಜೆಪಿ ಸಂಸದೆ ದಗ್ಗುಬಾಟಿ ಪುರಂದೇಶ್ವರಿ ಅವರ ಹೆಸರು ಕೂಡ ರೇಸ್‌ನಲ್ಲಿದೆ. ಹಿರಿಯ ನಾಯಕಿ ಪುರಂದೇಶ್ವರಿ ಈಗಾಗಲೇ ಹಲವಾರು ಪ್ರಮುಖ ಹುದ್ದೆಗಳಲ್ಲಿದ್ದಾರೆ. ಇತ್ತೀಚಿನವರೆಗೂ ಪುರಂದೇಶ್ವರಿ ಅವರು ಆಂಧ್ರ ಬಿಜೆಪಿ ಅಧ್ಯಕ್ಷರಾಗಿ ಮುಂದುವರೆದಿದ್ದರು. ಇವರ ಹೆಸರು ಅಧ್ಯಕ್ಷರ ರೇಸ್‌ನಲ್ಲಿ ಕೇಳಿಬಂದಿರುವುದು ಹಲವರ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ: ಆಕಾಶ್ ದೀಪ್ ಮಾಡಿದ ಒಂದು ತಪ್ಪಿಗೆ ಮೈದಾನದಲ್ಲೇ ಕೂಗಾಡಿದ ನಾಯಕ ಶುಭಮಾನ್ ಗಿಲ್: ವಿಡಿಯೋ ವೈರಲ್..! Shubman Gill
ಆದಾಗ್ಯೂ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಹೆಸರೂ ರೇಸ್‌ನಲ್ಲಿ ಪ್ರಮುಖವಾಗಿದೆ. ಅವರ ವ್ಯಾಪಕ ಅನುಭವ ಮತ್ತು ನಾಯಕತ್ವ ಕೌಶಲ್ಯದ ಬಗ್ಗೆ ತೀವ್ರ ಚರ್ಚೆ ನಡೆದಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಮತ್ತೊಂದೆಡೆ, ಸೀತಾರಾಮನ್ ಅವರಿಗೆ ಅಧ್ಯಕ್ಷರ ಜವಾಬ್ದಾರಿಯನ್ನು ನೀಡುವುದರಿಂದ ದಕ್ಷಿಣದಲ್ಲಿ ಪಕ್ಷವನ್ನು ಬಲಪಡಿಸಲು ಮತ್ತು ಪಕ್ಷವನ್ನು ವಿಸ್ತರಿಸಲು ಸಹಾಯ ಮಾಡುತ್ತದೆ ಎಂದು ಪಕ್ಷದ ನಾಯಕತ್ವ ಭಾವಿಸಿದೆ.
ತಮಿಳುನಾಡಿನಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಿರ್ಮಲಾ ಪ್ರಮುಖ ಪಾತ್ರ ವಹಿಸುತ್ತಾರೆ. ಇದಲ್ಲದೆ, ಅವರು ಕೇಂದ್ರ ಹಣಕಾಸು ಸಚಿವೆ ಮತ್ತು ರಕ್ಷಣಾ ಸಚಿವೆಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವುದು ಗಮನಾರ್ಹ. ಈ ಎಲ್ಲ ಅಂಶಗಳು ಪಕ್ಷದ ಮುಂದಿರುವಾಗ ಯಾರು ನೂತನ ಮಹಿಳಾ ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ ಎಂಬುದೇ ಸದ್ಯ ಕೌತುಕದ ಪ್ರಶ್ನೆಯಾಗಿದೆ,(ಏಜೆನ್ಸೀಸ್).