ಕೋಲಾರ: ಹಿಪ್ಪು ನೇರಳೆ ತೋಟದ ಮಕ್ಕದ ಜಮೀನಿನಲ್ಲಿನ ಮಾವಿನ ಮರಕ್ಕೆ ಕ್ರಿಮಿನಾಶಕ ಸಿಂಪಡಣೆ ಮಾಡಿದ ಪರಿಣಾಮ ಔಷಧಯುಕ್ತ ಹಿಪ್ಪು ನೇರಳೆ ಸೊಪ್ಪು ತಿಂದ ರೇಷ್ಮೆ ಹುಳುಗಳು ಮೃತಪಟ್ಟಿವೆ.
ಇನ್ನೇನು ವಾರ ಕಳೆದಿದ್ದರೆ ಮಾರುಕಟ್ಟೆಗೆ ಗೂಡು ತಂದು ಮಾರಾಟ ಮಾಡಬೇಕಾಗಿತ್ತು, ಅಷ್ಟರೋಳಗೆ ರೇಷ್ಮೆ ಹುಳುಗಳು ನಾಶವಾಗಿದ್ದು, ತಾಲೂಕಿನ ಅಲೇರಿ ಗ್ರಾಮದ ಅಲೇರಿ ನರಸಿಂಹರೆಡ್ಡಿ ಮತ್ತು ಕೃದ್ದೀನ್ ಅವರಿಗೆ ಸೇರಿದ ಮೂರು ಮಟ್ಟಿ ರೇಷ್ಮೆ ಹುಳುಗಳು ಇಲ್ಲವಾಗಿವೆ.
ನಾಲ್ಕನೇ ಜ್ವರ ಬಂದು ನಾಲ್ಕು ದಿನಗಳು ಕಳೆದಿರುವ ಹೊತ್ತಿನಲ್ಲೇ, ಹಿಪ್ಪು ನೇರಳೆ ತೋಟದ ಪಕ್ಕದ ಮಾವಿನ ಗಿಡಗಳಿಗೆ ಔಷಧ ಸಿಂಪಡಣೆ ಮಾಡಿರುವುದರಿಂದ ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದ್ದು, ರೈತರು ಕಂಗಾಲಾಗಿದ್ದಾರೆ.
ವೆಂಕಟರಾಮೇಗೌಡ ಎಂಬುವವರು ಮಾವಿನ ತೋಟಕ್ಕೆ ಔಷಧ ಸಿಂಪಡಣೆ ಮಾಡಿರುವುದರಿಂದ ಪಕ್ಕದಲ್ಲೇ ಇದ್ದ ಹೊಪು$್ಪನೇರಳೆ ತೋಟಕ್ಕೆ ಔಷಧ ತಾಗಿದೆ. ಮಾವಿನ ಮರಕ್ಕೆ ಔಷಧ ಸಿಂಪಡಣೆ ಮಾಡಿರುವುದನ್ನು ಹೇಳೇ ಇಲ್ಲ. ಆದ್ದರಿಂದ ಸಾಮಾನ್ಯವಾಗಿ ಸೋಪ್ಪನ್ನು ಕೋಯ್ದುಕೊಂಡು ಬಂದು ಹುಳುಗಳಿಗೆ ನೀಡಿದ್ದು, ಈಗ ಸಂಪೂರ್ಣ ಹುಳುಗಳು ಸತ್ತು ಹೋಗಿವೆ. ಇದರಿಂದಾಗಿ ಸುಮಾರು 2 ಲಕ್ಷ ರೂ.ಗೂ ಹೆಚ್ಚು ನಷ್ಟ ಉಂಟಾಗಿದೆ. ಅದಲ್ಲೂ ನಾವು ಸೊಪ್ಪನ್ನು ಕೊಂಡುಕೊಂಡು ಬಂದು ಮೇಯಿಸುತ್ತಿದ್ದು, ನ್ಯಾಯ ಒದಗಿಸಿಕೊಡಬೇಕು ಎಂದು ರೈತ ನರಸಿಂಹ ರೆಡ್ಡಿ ಅಳಲು ತೋಡಿಕೊಂಡಿದ್ದಾರೆ.