ಭಾರತ ಕಿರಿಯರ ಬಾಸ್ಕೆಟ್ಬಾಲ್ ತಂಡಕ್ಕೆ ಮೂವರು ಕನ್ನಡತಿಯರು ಆಯ್ಕೆ
ಬೆಂಗಳೂರು: ಕರ್ನಾಟಕದ ಮೂವರು ಆಟಗಾರ್ತಿಯರಾದ ಮಹೆಕ್ ಶರ್ಮ, ಅದಿತಿ ಸುಬ್ರಮಣ್ಯನ್ ಮತ್ತು ತಾರುಶೀ ತರುಣ್ ಭಾರತದ 18 ವಯೋಮಿತಿ ಮಹಿಳಾ ಬಾಸ್ಕೆಟ್ಬಾಲ್ (basketball) ತಂಡಕ್ಕೆ ಆಯ್ಕೆಯಾಗಿದ್ದಾರೆ. ಜುಲೈ 13ರಿಂದ 19ರವರೆಗೆ ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆಯಲಿರುವ ಫಿಬಾ 18 ವಯೋಮಿತಿ ಮಹಿಳಾ ಏಷ್ಯಾಕಪ್ ಬಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಈ ತಂಡ ಭಾಗವಹಿಸಲಿದೆ.
ಬಿಎಸ್ ಶ್ರೀಧರ್ ಟೂರ್ನಿಗೆ ಆಯುಕ್ತರಾಗಿ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಬಾಸ್ಕೆಟ್ಬಾಲ್ ಸಂಸ್ಥೆ ತಿಳಿಸಿದೆ.