ಕೋಲಾರ ಪತ್ರಕರ್ತರ ಭವನದಲ್ಲಿ ಗುರುವಾರ ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲ ವಾನರಾಶ್ರಿ ಬಾಲಕೃಷ್ಣ ಭಾಗವತರ್​ ಮಾತನಾಡಿದರು.  
ನ್ಯೂಸ್

ಕೈವಾರ ಮಠದಲ್ಲಿ 3 ದಿನ ಸಂಗೀತೋತ್ಸವ

ಕೋಲಾರ: ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಕೈವಾರ ತಾತಯ್ಯನವರ ಮಠದಲ್ಲಿ ಮೂರು ದಿನಗಳ ಕಾಲ ಗುರುಪೂಜಾ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಯೋಗಿನಾರೇಯಣ ಸಂಕೀರ್ತನಾ ಯೋಜನೆಯ ಸಂಚಾಲಕ ವಾನರಾಶಿ ಬಾಲಕೃಷ್ಣ ಭಾಗವತರ್​ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.8,9 ಹಾಗೂ 10ರಂದು ಹೆಸರಾಂತ ಕಲಾವಿದರು ನಿರಂತರವಾಗಿ 72 ಗಂಟೆಗಳ ಕಾಲ ಸಂಗೀತದ ರಸದೌತಣ ನೀಡಲಿದ್ದಾರೆ. ಜು.8ರಂದು ಬೆಳಗ್ಗೆ 6 ಗಂಟೆಗೆ ಸಾಮೂಹಿಕ ನಾಮ ಸಂಕೀರ್ತನೆಯೊಂದಿಗೆ ಸಂಗೀತೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ. ಸಂಜೆ ವಿಶೇಷ ಕಾರ್ಯಕ್ರಮಗಳಲ್ಲಿ ತಿರುಪತಿಯ ಬಿ.ರಘುನಾಥ್​, ಬೆಂಗಳೂರಿನ ವಿವೇಕ್​ ಸದಾಶಿವಂ, ಬೆಂಗಳೂರು ಸಹೋದರರಾದ ಹರಿಹರನ್​ ಮತ್ತು ಅಶೋಕ್​, ಅಧಿತಿ ಪ್ರಹ್ಲಾದ್​ ಅವರಿಂದ ಗಾಯನ ಹಾಗೂ ನಾಟ್ಯಾಂಜಲಿ ಕಲಾಕೇಂದ್ರ ಕೈವಾರ, ಚಿಂತಾಮಣಿ ಸಾಯಿಕಲಾ ನಿಕೇತನ್​ ತಂಡದವರಿಂದ ಭರತನಾಟ್ಯ ಇರುತ್ತದೆ ಎಂದರು.

ಜು.9 ರಂದು ಪಿ.ಜೆ.ಬ್ರಹ್ಮಾಚಾರಿ, ಪ್ರಿಯಾಬ್ರಹ್ಮ, ಮೈಸೂರು ನಾಗರಾಜ್​ ಮತ್ತು ಡಾ.ಮಂಜುನಾಥ್​ ಅವರಿಂದ ಪಿಟೀಲು ಸೋಲೋ, ಡಾ.ಶ್ರೀಕಾಂತಂ ನಾಗೇಂದ್ರಶಾಸ್ತ್ರೀ, ಕೇರಳದ ಡಾ.ಎನ್​.ಜೆ.ನಂದಿನಿ ಮತ್ತು ಕೋಲಾರದ ಬಿ.ಆರ್​.ರಾಜಪ್ಪ ತಂಡದಿದ ಗಾಯನ, ನೂಪೂರ ಫೈನ್​ಆರ್ಟ್ಸ್​ನ ರೂಪಾ ರಾಜೇಶ್​ರಿಂದ ನೃತ್ಯರೂಪಕ ಹಮ್ಮಿಕೊಳ್ಳಲಾಗಿದೆ ಎಂದರು.

ಜು.10 ಗುರುಪೂರ್ಣಿಮ ದಿನ ತಾತಯ್ಯನವರು ರಚಿಸಿರುವ ಪಂಚರತ್ನ ಕೀರ್ತನೆಗಳ ಗೋಷ್ಠಿಗಾಯನ ನಡೆಯಲಿದೆ. ನಂತರ ತಾತಯ್ಯನವರಿಗೆ ವಿಶೇಷ ಗುರುಪೂಜೆ ನೆರವೇರಿಸಲಾಗುವುದು. ಅಂದು ಕೈವಾರ ಕ್ಷೇತ್ರದಿಂದ ಪ್ರಕಟವಾಗುವ ಮಲ್ಲಾರ ಮಾಸ ಪತ್ರಿಕೆಯ 25ನೇ ವರ್ಷದ ವಿಶೇಷ ಸಂಚಿಕೆ ಬಿಡುಗಡೆಗೊಳಿಸಲಾಗುವುದು ಎಂದರು.

ಆನೂರು ಅನಂತಕೃಷ್ಣಶರ್ಮ ತಂಡದವರಿಂದ ಲಯಲಹರಿ ತಾಳವಾದ್ಯ, ಚೆನ್ನೆ$ನ ಅಭಿಷೇಕ್​ ರಘುರಾಮ್​ ಗಾಯನ, ರಾಜೇಶ್​ ವೈದ್ಯ ಹಾಗೂ ಯು.ರಾಜೇಶ್​ರಿಂದ ವೀಣೆ ಮತ್ತು ಮ್ಯಾಂಡೋಲಿನ್​ ವಾದನದ ಸೋಲೋ, ನಯನಾ ರಮೇಶ್​ ಭರತನಾಟ್ಯ, ಪುತ್ತೂರು ಗಣೇಶ್​ ಸ್ಯಾಕ್ಸೋಫೋನ್​, ತಿರುಪಂಬೂರು ಟಿ.ಎಸ್​.ಎನ್​.ಕುಂಜಿತಾ ಬಾಲನ್​, ಟಿ.ಎಸ್​.ಎನ್​.ಶೇಷಗೋಪಾಲನ್​, ವಿ.ಸತ್ಯನಾರಾಯಣ್​ ತಿರುಪತಿ, ಎಂ.ವಿ.ಸುಬ್ಬರಾಮಯ್ಯ ತಿರುಪತಿ, ವಿ.ರಮೇಶ್​ ಬೇತಮಂಗಲ, ವಿ.ಆರ್​.ನಟರಾಜ್​ ಅವರಿಂದ ನಾದಸ್ವರ, ಪಿ.ಎಂ.ರಂಜಿತ್​ ವಿನಾಯಕ್​, ಮುತ್ತುಕುಮಾರ್​, ಸೆಲ್ವ ಗಣಪತಿ ಚೆನ್ನೆ$, ಮನೋಹರ್​ ಕಂದಕೂರು, ಶ್ರೀನಿವಾಸ್​ ತಿರುಪತಿ, ನಟರಾಜ್​ ತಂಡದಿಂದ ತವಿಲ್​ ವಾದನ ಕಾರ್ಯಕ್ರಮ ನೆರವೇರಲಿದೆ ಎಂದು ಮಾಹಿತಿ ನೀಡಿದರು.

ಯೋಗಿನಾರೇಯಣ ಮಠದ ವ್ಯವಸ್ಥಾಪಕ ಕೆ.ಲಕ್ಷಿ$್ಮನಾರಾಯಣ, ಸಮಾಜ ಸೇವಕ ಸತ್ಯನಾರಾಯಣ, ಆನಂದ್​ ಉಪಸ್ಥಿತರಿದ್ದರು.