ನ್ಯೂಸ್

3.50 ಲಕ್ಷ ರೂ. ಮೌಲ್ಯದ ಅಡಕೆ ಕಳವು ಆರೋಪಿ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದ ಕಾಯರ್ತಡ್ಕದಲ್ಲಿ ಕಾರುಣ್ಯ ಟ್ರೇಡರ್ಸ್‌ನಿಂದ ಅಡಕೆ ಕಳವು ಮಾಡಿದ ಆರೋಪಿಯನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.
ರೆಖ್ಯ ಗ್ರಾಮದ ವಿನೋದ್ (27) ಬಂಧಿತ ಆರೊಪಿ. ಸಿದ್ದಿಕ್ ಅವರ ಅಡಕೆ ಖರೀದಿ ಅಂಗಡಿಯಿಂದ ಆರೋಪಿ 1.50 ಲಕ್ಷ ರೂ. ಮೌಲ್ಯದ 85 ಕಿ.ಗ್ರಾಂ ಮೌಲ್ಯದ ಕಳವು ಮಾಡಿದ್ದ. ಮತ್ತೊಂದು ಕಡೆ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ 2 ಲಕ್ಷ ರೂ. ಮೌಲ್ಯದ 4 ಕ್ವಿಂಟಾಲ್ ಅಡಕೆ ಕಳವು ಮಾಡಿದ್ದ. ಕೃತ್ಯಕ್ಕೆ ಬಳಸಿದ್ದ ಜೀಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ. ನೇತೃತ್ವದಲ್ಲಿ ಧರ್ಮಸ್ಥಳ ಪಿಎಸ್‌ಐ ಪವನ್ ನಾಯಕ್ ಮತ್ತು ಸಿಬಂದಿ ವೆಂಕಟೇಶ್, ಥಾಮಸ್, ಸತೀಶ್ ನಾಯ್ಕ, ಪ್ರವೀಣ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.