ರಾಮನಗರ : ಕೋವಿಡ್ 2ನೇ ಅಲೆಯಲ್ಲಿ ಉಂಟಾದ ಅನಾಹುತಕ್ಕೆ ಸರ್ಕಾರವೇ ನೇರ ಹೊಣೆಯಾಗಿದ್ದು, ಕನಿಷ್ಠ ಮೂರನೇ ಅಲೆಯನ್ನಾದರೂ ಜವಾಬ್ದಾರಿಯಿಂದ ಎದುರಿಸಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನಗರಸಭೆ ಆವರಣದಲ್ಲಿ ಪಕ್ಷದ ವತಿಯಿಂದ ಬುಧವಾರ ಪೌರ ಕಾರ್ಮಿಕರಿಗೆ ುಡ್‌ಕಿಟ್ ವಿತರಿಸುವ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವೈದ್ಯರು, ತಜ್ಞರು ಎಚ್ಚರಿಸಿದ ನಂತರವೂ ಸರ್ಕಾರ ಎರಡನೇ ಅಲೆ ನಿಯಂತ್ರಣದ ಬಗ್ಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ವಿಲವಾಗಿದೆ.
ಕೋವಿಡ್ 2ನೇ ಅಲೆಯ ಅವಾಂತರಕ್ಕೆ ಸರ್ಕಾರವೇ ನೇರ ಹೊಣೆ. ಇದರಿಂದಾಗಿ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಆರ್ಥಿಕವಾಗಿ ಸ್ಪಂದಿಸುವಂತೆ ನಾಯಕರಾದ ಕುಮಾರಸ್ವಾಮಿ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಜನ ಇಂದು ಆರ್ಥಿಕವಾಗಿ, ಮಾನಸಿಕವಾಗಿ ತೊಂದರೆಯಲ್ಲಿದ್ದು, ಈ ಕುಟುಂಬಗಳಿಗೆ ಸರ್ಕಾರ ತಲಾ 10 ಸಾವಿರ ರೂ. ಪರಿಹಾರ ಕೊಟ್ಟಿದ್ದರೆ ಖಜಾನೆ ಖಾಲಿಯಾಗುತ್ತಿರಲಿಲ್ಲ ಎಂದರು.
ಈಗಾಗಲೇ 3ನೇ ಅಲೆಯ ಲಕ್ಷಣಗಳು ಕಾಣಿಸುತ್ತಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ವಿಶ್ವದ ಕೆಲವು ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ವೈರಾಣುವಿನ ರೂಪಾಂತರ ಕಾಣಿಸಿಕೊಂಡಿದೆ. ನಮ್ಮ ದೇಶದಲ್ಲೂ ಕಾಣಿಸಿಕೊಳ್ಳಲಾರಂಭಿಸಿದೆ. ಪರಿಸ್ಥಿತಿ ಇನ್ನೆಷ್ಟು ಹದಗೆಡುತ್ತದೆ ಎಂಬುದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಸದ್ಯಕ್ಕೆ ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆಯೊಂದೇ ರಾಮಬಾಣ. ಈ ಸೋಂಕಿಗೆ ಇನ್ನು ಔಷಧ ಕಂಡು ಹಿಡಿದಿಲ್ಲ. ಆದ್ದರಿಂದ ಜನರು ಕೋವಿಡ್ ಲಸಿಕೆ ಪಡೆಯಬೇಕು. ಗ್ರಾಮೀಣ ಭಾಗದಲ್ಲಿ ಕೆಲವರು ಲಸಿಕೆ ಪಡೆಯಬೇಕೋ - ಬೇಡವೋ ಎಂಬ ಗೊಂದಲದಲ್ಲಿದ್ದಾರೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಅವರಲ್ಲಿ ಜಾಗತಿ ಮೂಡಿಸುವಂತೆ ಸೂಚಿಸಿರುವುದಾಗಿ ಹೇಳಿದರು.ಲಸಿಕೆ ಮೇಲೆ ನಂಬಿಕೆ ಇಟ್ಟು ಎಲ್ಲರೂ ಲಸಿಕೆ ಪಡೆಯಬೇಕು. ಪಕ್ಷದ ವತಿಯಿಂದ ಪೌರ ಕಾರ್ಮಿಕರಿಗೆ ುಡ್ ಕಿಟ್ ವಿತರಿಸುತ್ತಿರುವುದು ತಾತ್ಕಾಲಿಕ ಪರಿಹಾರವಷ್ಟೆ. ಇದು ಕೊಡುಗೆ ಅಲ್ಲ ಎಂದು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಶೇಖರ್, ನಗರಸಭೆ ಆಯುಕ್ತ ನಂದಕುಮಾರ್, ಜೆಡಿಎಸ್ ಪ್ರಮುಖರಾದ ಬಿ. ಉಮೇಶ್, ರೈಡ್ ನಾಗರಾಜ್, ಗೂಳಿಗೌಡ ಕುಮಾರ್, ಸಿ.ಎಸ್.ಜಯಕುಮಾರ್, ಅಜಯ್ ದೇವೇಗೌಡ, ನಗರಸಭೆಯ ಸದಸ್ಯರು, ಪಕ್ಷದ ಸ್ಥಳೀಯ ಪ್ರಮುಖ ಕಾರ್ಯಕರ್ತರು ಹಾಜರಿದ್ದರು.