ಕೊಳ್ಳೇಗಾಲದ ಎಸ್‌ವಿಕೆ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ತೆರಳಿದ ವಿದ್ಯಾರ್ಥಿಗಳು. 
ನ್ಯೂಸ್

ಕೊಳ್ಳೇಗಾಲದಲ್ಲಿ ದ್ವಿತೀಯ ಪಿಯು ಪರೀಕ್ಷೆ ಸುಗಮ

ಕೊಳ್ಳೇಗಾಲ: ರಾಜ್ಯದಲ್ಲಿ ದ್ವೀತಿಯ ಪಿಯುಸಿ ಪರೀಕ್ಷೆ ಪ್ರಾರಂಭವಾಗಿದ್ದು ಗುರುವಾರ ಪಟ್ಟಣದ ಐದು ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ.

ಪಟ್ಟಣದ ಲಯನ್ಸ್ ವಿದ್ಯಾಸಂಸ್ಥೆ, ನಿಸರ್ಗ ವಿದ್ಯಾನಿಕೇತನ, ಎಂಜಿಎಸ್ ಜೂನಿಯರ್ ಕಾಲೇಜು, ಎಸ್‌ವಿಕೆ ಬಾಲಿಕಾ ಕಾಲೇಜು ಹಾಗೂ ಜೆಎಸ್‌ಎಸ್ ಕಾಲೇಜಿನಲ್ಲಿ ತೆರೆಯಲಾಗಿದ್ದ ಒಟ್ಟು 5 ಪರೀಕ್ಷಾ ಪರೀಕ್ಷೆ ಕೇಂದ್ರಗಳಲ್ಲಿ ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30 ಪರೀಕ್ಷೆ ನಡೆದಿದೆ. ಕೊಳ್ಳೇಗಾಲ ತಾಲೂಕಿನಲ್ಲಿ ಕನ್ನಡ ವಿಷಯದ ಪರೀಕ್ಷೆಯನ್ನು 2,037 ವಿದ್ಯಾರ್ಥಿಗಳು ತೆಗೆದುಕೊಂಡಿದ್ದು ಈ ಪೈಕಿ ಕೆಲ ವಿದ್ಯಾರ್ಥಿಗಳು ಗೈರಾಗಿದ್ದರು.
ಈ ವೇಳೆ, 3 ಜನರ ಒಳಗೊಂಡ 1 ಜಿಲ್ಲಾ ಮಟ್ಟದ ಸ್ಕೌಡ್ ತಂಡ, ಡಿಡಿಪಿಯು ನೇತೃತ್ವದ 1 ಸ್ಕೌಡ್ ತಂಡ ಹಾಗೂ ಜಿಲ್ಲಾಧಿಕಾರಿ ವತಿಯಿಂದ ನೇಮಿಸಲಾಗಿರುವ ಪರೀಕ್ಷಾ ಪರಿವೀಕ್ಷಕರ ತಂಡ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ಕೇಂದ್ರದ ಮುಂಭಾಗ ಬಂದೋಬಸ್ತ್‌ಗೆ ಪೊಲೀಸರನ್ನು ನಿಯೋಜಿಸಲಾಗಿತ್ತು.