ನ್ಯೂಸ್

29ಕ್ಕೆ ಸಂವಿಧಾನ ಕುರಿತು ಉಪನ್ಯಾಸ

ನಂಜನಗೂಡು: ದಲಿತ ಸಂಘರ್ಷ ಸಮಿತಿಯಿಂದ ಜು.29ರಂದು ಸಂವಿಧಾನ ಮತ್ತು ಪ್ರಜಾಪ್ರಭುತ್ವ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದಸಂಸ ಉಪವಿಭಾಗೀಯ ಸಂಚಾಲಕ ಮಂಜು ಶಂಕರಪುರ ತಿಳಿಸಿದರು.


ಅಂದು ಬೆಳಗ್ಗೆ 11 ಗಂಟೆಗೆ ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್‌ದಾಸ್ ಉಪನ್ಯಾಸ ನೀಡಲಿದ್ದು, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ಪ್ರಾಸ್ತಾವಿಕ ನುಡಿಗಳನ್ನಾಡುವರು. ನೂತನ ಪದಾಧಿಕಾರಿಗಳ ಪದಗ್ರಹಣವನ್ನು ಅಲಗೂಡು ಶಿವಕುಮಾರ್ ನೆರವೇರಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.


ದಸಂಸ ಮುಖಂಡರಾದ ಗಟ್ಟವಾಡಿ ಮಹೇಶ್, ಸಿದ್ದೇಗೌಡನಹುಂಡಿ ಸುರೇಶ್, ಮಹೇಶ್, ಗಜೇಂದ್ರ, ಹೊಳೆಯಪ್ಪ, ಮರಿಸ್ವಾಮಿ, ನಟರಾಜು, ರತ್ನಯ್ಯ ಹಾಜರಿದ್ದರು.