ರಾಷ್ಟ್ರೀಯ ಕ್ರೀಡಾ ಕ್ಲೈಂಬಿಂಗ್ ಚಾಂಪಿಯನ್‌ಷಿಪ್ ಮುಕ್ತಾಯ
ಬೆಂಗಳೂರು: ಡಿಸೆಂಬರ್ 26 ರಿಂದ 29ರವರೆಗೆ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿಯಲ್ಲಿ ಆಯೋಜಿಸಿದ್ದ 29ನೇ ರಾಷ್ಟ್ರೀಯ ಕ್ರೀಡಾ ಕ್ಲೈಂಬಿಂಗ್ ಚಾಂಪಿಯನ್‌ಷಿಪ್ ಯಶಸ್ವಿಯಾಗಿ ಮುಕ್ತಾಯ ಕಂಡಿದೆ.
ಬೌಲ್ಡರ್ ವಿಭಾಗದ ಜೂನಿಯರ್ ಬಾಲಕಿಯರ ಫೈನಲ್ನಲ್ಲಿ ಉತ್ತರ ವಲಯದ ಅಮಿಯೆರಾ
83.8 ಅಂಕ ಕಲೆಹಾಕಿ ಚಿನ್ನದ ಪದಕ ಜಯಿಸಿದರು. ಪೂರ್ವ ವಲಯದ ಸಾವಿತ್ರಿ ಸಮದ್ (50 ಅಂಕ) ಬೆಳ್ಳಿ, ಉತ್ತರದ ವಲಯದ ಗುಂತಾಸ್ ಕೌಡ್ ಚಬರ (24.8 ಅಂಕ) ಮೂರನೇ ಸ್ಥಾನದೊಂದಿಗೆ ಕಂಚು ಗೆದ್ದರು. ಮಿಶ್ಕಾ ಚೌಧರಿ (ದಕ್ಷಿಣ), ಮುಸ್ಕಾನ್ ಬಾಂದ್ರಾ (ಪೂರ್ವ), ಅರ್ಷಿಯಾ ಬಾನು (ದಕ್ಷಿಣ), ಶರಾಯು ಯೋಗೇಶ್ (ಪಶ್ಚಿಮ) ಕ್ರಮವಾಗಿ ನಂತರದ ಸ್ಥಾನಗಳನ್ನು ಪಡೆದರು.