ನ್ಯೂಸ್

ಡ್ಯಾಡಿ ಎಂದು ಭಾವಿಸಿದವನನ್ನೇ ಮದುವೆಯಾದ ಸುಂದರಿ! ಟ್ರೋಲ್​ಗಳಿಗೆ ಏನೆಂದಳು ನೋಡಿ..

ನವದೆಹಲಿ: ಪ್ರೀತಿಯೇ ಹಾಗೆ..ಎಲ್ಲಿ?ಯಾವಾಗ ಚಿಗುರೊಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅಂತಹದೇ ಪ್ರೇಮಕಥೆಯೊಂದು ಇಲ್ಲಿದೆ. 29 ವರ್ಷದ ಸುಂದರಿ ತನ್ನ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 50 ವರ್ಷದ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾಗಿದ್ದಾಳೆ. ಬಾಲ್ಯದಿಂದಲೂ ಆತನ ಮೇಲಿದ್ದ ಗೌರವ ಪ್ರೀತಿಗೆ ತಿರುಗಿ ಮದುವೆಯಾಗಿದ್ದೇನೆ ಎನ್ನುತ್ತಿರುವ ಆಕೆಯನ್ನು ನೆಟ್ಟಿಗರು ಟೀಕಿಸುತ್ತಿದ್ದಾರೆ.

ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲ ಮೂಡಿಸಿದ್ದು, ಸಾರ್ವಜನಿಕರ ಗಮನ ಸೆಳೆದಿದೆ. ಮಹಿಳೆಯೊಬ್ಬರು ವಯಸ್ಸಾದ ಪುರುಷನನ್ನು ಮದುವೆಯಾಗುವುದು ಅಪರೂಪದ ವಿದ್ಯಮಾನವಲ್ಲದಿದ್ದರೂ ರಿಯಾಲಿನ್ ಸೊಲೆರೊ ತನಗಿಂತ 24 ವರ್ಷ ಹಿರಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಟ್ರೋಲ್‌ಗೆ ಗುರಿಯಾಗುತ್ತಿದ್ದಾಳೆ.

ಇದನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿರುವ ಆಕೆ 53 ವರ್ಷ ವಯಸ್ಸಿನ ರೆನಾಲ್ಡೊ ಮೆಕ್ಕ್ವೀನ್ ಅವರನ್ನು ಪ್ರೀತಿಸುತ್ತಿದ್ದೆ. ತನ್ನ ತಂದೆಯ ವಯಸ್ಸಿನ ಪುರುಷ ನನ್ನ ಜೀವಿತಾವಧಿಯ ಸಂಗಾತಿಯಾಗುತ್ತಾನೆಂದು ಎಂದಿಗೂ ಯೋಚಿಸಿರಲಿಲ್ಲ ಎಂದು ಆಕೆ ಹೇಳಿಕೊಂಡಿದ್ದಾಳೆ.

ನನ್ನ ಆಯ್ಕೆಯನ್ನು ಕುಟುಂಬ ಬೆಂಬಲಿಸಲಿಲ್ಲ. ಅವರು ಆಕ್ರೋಶಗೊಂಡಿದ್ದರು. ಆದರೆ ನನ್ನ ನಿರ್ಧಾರ ದೃಢವಾಗಿತ್ತು. ಹಣ, ಐಷಾರಾಮಿ ಜೀವನಕ್ಕಾಗಿ ರೆನಾಲ್ಡೋನನ್ನು ಮದುವೆಯಾದಳು ಎಂದು ಹಲವರು ಭಾವಿಸಿದ್ದರು. ನಮ್ಮ ಮದುವೆಯನ್ನು ಜನರು ಗೇಲಿ ಮಾಡಿದರು. ಮದುವೆಯ ಬಗ್ಗೆ ಅನೇಕರು ಪ್ರಶ್ನಿಸಿದರು. ಟೀಕೆಯ ಕಾಮೆಂಟ್‌ಗಳನ್ನು ಸಹನೆಯಿಂದಲೇ ಸ್ವೀಕರಿಸಿದೆ. ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಈಗ ನಮಗೆ ಮಗುವಾಗಿದೆ. ತುಂಬಾ ಖುಷಿಯಾಗಿದ್ದೇವೆ ಎಂದು ರಿಯಾಲಿನ್ ಸೊಲೆರೊ ಹೇಳಿಕೊಂಡಿದ್ದಾಳೆ.