ನಗರದ ಹಿಂದುಸ್ತಾನ್ ಕಾಲೇಜಿನಲ್ಲಿ ಫೆ.27 ಮತ್ತು 28ರಂದು ಡಾ.ಕೆ.ಸಿ.ಜಿ.ವರ್ಗೀಸ್ ಸ್ಮರಣಾರ್ಥ ಟ್ರೋಫಿ ರಾಷ್ಟ್ರ ಮಟ್ಟದ ಅಂತರ ಕಾಲೇಜು ‘ಸ್ಪೆಕ್ಟ್ರಾ-2025’ ಆಯೋಜಿಸಲಾಗಿದೆ ಎಂದು ಪ್ರಾಚಾರ್ಯರಾದ ಡಾ.ಸಿ.ಜೆ.ಪ್ರಿಯಾ ತಿಳಿಸಿದರು.
ಎರಡು ದಿನಗಳ ಕಾಲ ವ್ಯವಹಾರ ನಿರ್ವಹಣೆ, ಮಾಹಿತಿ ತಂತ್ರಜ್ಞಾನ, ವಾಯುಯಾನ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿವೆ. ಫೆ.27ರಂದು ಬೆಳಗ್ಗೆ 9.30ಕ್ಕೆ ಬಸಂತ್ ಕನ್ವೆನ್ಷನ್ ಹಾಲ್‌ನಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಮೈಸೂರು ವಿವಿ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕ ಪ್ರೊ.ಕೆ.ಮಂಟೆಲಿಂಗು ಭಾಗವಹಿಸಲಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.28ರ ಸಂಜೆ 6.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಅತಿ ಹೆಚ್ಚು ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ 20 ಸಾವಿರ ರೂ.ನಗದು, ಎರಡನೇ ತಂಡಕ್ಕೆ 10 ಸಾವಿರ ರೂ.ನಗದು ನೀಡಲಾಗುತ್ತದೆ ಎಂದರು.