ನ್ಯೂಸ್

27 ರಂದು ಶ್ರೀನಿವಾಸ ಕಲ್ಯಾಣೋತ್ಸವ

ಕೆ.ಆರ್.ಮೊಹಲ್ಲಾ ಸಪ್ತಪದಿ ಫೌಂಡೇಷನ್ ಟ್ರಸ್ಟ್ ವತಿಯಿಂದ ಮಂಗಳ ಸೂತ್ರ ಫೌಂಡೇಷನ್, ಶ್ರೀರಾಮಮಂದಿರ ಆಡಳಿತ ಮಂಡಳಿ ಹಾಗೂ ವಿವಿಧ ಬ್ರಾಹ್ಮಣ ಸಂಘಟನೆಗಳ ಸಹಯೋಗದಲ್ಲಿ ಜು.27ರಂದು ಶ್ರೀರಾಮಮಂದಿರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಉಚಿತ ವಧು ವರರ ಸಮಾವೇಶ ಆಯೋಜಿಸಿರುವುದಾಗಿ ಸಂಚಾಲಕ ಶ್ರೀನಿವಾಸ ಎಸ್.ಭಾರದ್ವಾಜ್ ತಿಳಿಸಿದರು.

ಅಂದು ಬೆಳಗ್ಗೆ 9 ರಿಂದ ಆರಂಭವಾಗುವ ಕಾರ್ಯಕ್ರಮ ಸಂಜೆ ವರೆಗೆ ನಡೆಯಲಿದೆ. ಇಳೈ ಆಳ್ವಾರ್ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸುವರು, ಶಾಸಕ ಕೆ.ಹರೀಶ್‌ಗೌಡ, ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್ ಹಾಗೂ ಇನ್ನಿತರರು ಹಾಜರಿರುವರು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶ್ರೀ ಇಳೈ ಆಳ್ವಾರ್ ಸ್ವಾಮೀಜಿ, ಸಮಾಜಸೇವಕ ರಘುರಾಂ ವಾಜಪೇಯಿ, ಎಸ್.ಬಾಲಕೃಷ್ಣ ಸಂಗಾಪುರ ಇದ್ದರು.