ನ್ಯೂಸ್

ಹಾಸ್ಟೆಲ್​ನಿಂದ ನಾಪತ್ತೆಯಾದ 26 ಹುಡುಗಿಯರು ಸುರಕ್ಷಿತ; ಮಧ್ಯಪ್ರದೇಶ ಸಿಎಂ ಮಾಹಿತಿ

ಭೋಪಾಲ್​: ಮಧ್ಯಪ್ರದೇಶದ ಪರ್ವಲಿಯಾದಲ್ಲಿ ಅನುಮತಿಯಿಲ್ಲದೆ ನಡೆಸಲಾಗುತ್ತಿದ್ದ ಬಾಲಕಿಯರ ಹಾಸ್ಟೆಲ್​ನಿಂದ 26 ಹುಡುಗಿಯರು ನಾಪತ್ತೆಯಾಗಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಮಾಜಿ ಸಿಎಂ ಶಿವರಾಜ್​ ಸಿಂಗ ಚೌಹಾಣ್​ ಒತ್ತಾಯಿಸಿದ್ದಾರೆ.

ಭೋಪಾಲ್​ನಿಂದ 20 ಕಿಮೀ ದೂರದಲ್ಲಿರುವ ಆಂಚಲ್​ ಬಾಲಕಿಯರ ಹಾಸ್ಟೆಲ್​ಗೆ ಮಕ್ಕಳ ರಣಾ ಆಯೋಗದ ತಂಡವು ಹೋದಾಗ, ಈ ಹಾಸ್ಟೆಲ್​ನಲ್ಲಿ ಒಟ್ಟು 68 ಹುಡುಗಿಯರು ವಾಸಿಸುತ್ತಿದ್ದಾರೆ ಎಂದು ನೋಂದಾಯಿಸಲಾಗಿದೆ. ಆದರೆ ತಪಾಸಣೆಯ ಸಮಯದಲ್ಲಿ ಕೇವಲ 41 ಹುಡುಗಿಯರು ಮಾತ್ರ ಪತ್ತೆಯಾಗಿದ್ದಾರೆ. 26 ಹುಡುಗಿಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.

ಗುಜರಾತ್​, ಜಾರ್ಖಂಡ್​, ರಾಜಸ್ಥಾನ ಹೊರತುಪಡಿಸಿ, ಸೆಹೋರ್​, ರೈಸನ್​, ಛಿಂದ್ವಾರಾ, ಬಾಲಾಘಾಟ್​ ಮತ್ತು ವಿದಿಶಾದ ಹುಡುಗಿಯರು ಎನ್ನಲಾಗಿದೆ. 4 ರಿಂದ 5 ವರ್ಷಗಳಿಂದ ಇಲ್ಲಿ ಬಾಲಕಿಯರು ಇದ್ದಾರೆ. ಕೆಲವೊಮ್ಮೆ ಹುಡುಗಿಯರನ್ನು ಮಾರುಕಟ್ಟೆಗೆ ಕರೆದುಕೊಂಡು ಹೋಗುತ್ತಿದ್ದರು. ತಡರಾತ್ರಿ ಹಾಸ್ಟೆಲ್​ಗೆ ವಾಹನಗಳು ಬರುತ್ತಿದ್ದವು ಎಂದು ಸ್ಥಳೀಯರಾದ ಪವನ್​ ಹೇಳಿದ್ದಾರೆ.

ಹುಡುಗಿಯರಿಗೆ ಬಲವಂತವಾಗಿ ಕ್ರಿಶ್ಚಿಯನ್​ ಆಚರಣೆ ಅಭ್ಯಾಸ ಮಾಡಿಸಲಾಗುತಿತ್ತು ಎಂದು ಸುತ್ತಮುತ್ತಲಿನ ಜನರು ಆರೋಪಿಸಿದ್ದಾರೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಣಾ ಆಯೋಗದ ಅಧ್ಯ ಪ್ರಿಯಾಂಕ್​ ಕಾನೂಂಗೊ ಮಧ್ಯಪ್ರದೇಶದ ಮುಖ್ಯ ಕಾರ್ಯದರ್ಶಿ ವೀರ ರಾಣಾ ಅವರಿಗೆ ಪತ್ರ ಬರೆದಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಕೋರಿದ್ದಾರೆ.