ಆಂಧ್ರಪ್ರದೇಶ:ಶಂಕರ್ ನಿರ್ದೇಶನದ ಟಾಲಿವುಡ್ ಮೆಗಾಪವರ್ಸ್ಟಾರ್ ರಾಮ್ಚರಣ್ ಅಭಿನಯದ 'ಗೇಮ್ ಚೇಂಚರ್' ಚಿತ್ರ ಇದೇ 2025ರ ಜನವರಿ 10ರಂದು ಬಿಡುಗಡೆಗೊಳ್ಳುತ್ತಿದ್ದು, ಅಭಿಮಾನಿಗಳು ಮತ್ತು ಸಿನಿ ರಸಿಕರು ಭಾರಿ ಕಾತುರದಿಂದ ಕಾಯುತ್ತಿದ್ದಾರೆ.
ಆದರೆ, ಅದಕ್ಕೂ ಮುನ್ನಾ ರಾಮ್ಚರಣ್ ಅವರ ಅಭಿಮಾನಿಗಳು ವಿಜಯವಾಡಲ್ಲಿ ಬರೊಬ್ಬರಿ 256 ಅಡಿ ಎತ್ತರದ ಬೃಹತ್ ಕಟೌಟ್ ಅನ್ನು ಭಾನುವಾರ(ಡಿ.29) ಅನಾವರಣಗೊಳಿಸಿದ್ದಾರೆ. ಭಾರತೀಯ ಚಿತ್ರಂರಂಗದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್ ಎತ್ತರದ ಕಟೌಟ್ ಎನಿಸಿದೆ ಎಂದು ವರದಿ ಉಲ್ಲೇಖಿಸಿವೆ.
ಹೌದು, ಈ ಮುಂಚೆ ಸಲಾರ್ ಬಿಡುಗಡೆಗೂ ಮುನ್ನ ಪ್ರಭಾಸ್ ಅವರ ಜನ್ಮದಿನ ಅಂಗವಾಗಿ 230 ಅಡಿ ಎತ್ತರದ ಕಟೌಟ್ ಹಾಕಿಸಿದ್ದರು. ಅಲ್ಲದೆ, ತಮಿಳುನಾಡಿನಲ್ಲಿ ಸೂರ್ಯ ಅವರ ಅಭಿಮಾನಿಗಳು 215 ಅಡಿ ಎತ್ತರದ ಮತ್ತು ಕರ್ನಾಟಕದಲ್ಲಿ ಕೆಜಿಎಫ್ ಸಿನಿಮಾ ಪ್ರದರ್ಶನದ ವೇಳೆ ರಾಕಿಂಗ್ ಸ್ಟಾರ್ ಯಶ್ ಅವರ 236 ಕಟೌಟ್ ಹಾಕಿಸಿದ್ದರು. ಇದೀಗ ರಾಮ್ಚರಣ್ ಅವರ ಕಟೌಟ್ 256 ಅಡಿ ಎತ್ತರ ಇದ್ದು, ಈ ಎಲ್ಲ ದಾಖಲೆಗಳನ್ನು ಮುರಿದಿದೆ ಎನ್ನಲಾಗಿದೆ.
ಇದನ್ನೂ ಓದಿ: ಡಯಾಬಿಟಿಸ್ ಸಮಸ್ಯೆ ನಿವಾರಣೆಗೆ ತಪ್ಪದೆ ಸೇವಿಸಿ ಪಪ್ಪಾಯಿ; ನಿಮಗಾಗಿ ಹೆಲ್ತಿ ಟಿಪ್ಸ್ | Health Tips
ಕಟೌಟ್ ಅನಾವರಣ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಪಾಲ್ಗೊಂಡಿದ್ದು. ಕಟೌಟ್ನಲ್ಲಿ ನಟ ರಾಮ್ಚರಣ್ ಲುಂಗಿ ಮತ್ತು ಕಪ್ಪು ಬಣ್ಣದ ಬನಿಯನ್(ಒಳ ಉಡುಪು) ಧರಿಸಿ ಮಿಂಚಿದ್ದಾರೆ. ನಟನ ಬೃಹತ್ ಕಟೌಟ್ ನೋಡಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಅಲ್ಲದೆ ಕೆಲವರು ರೋಮಾಂಚನಗೊಂಡಿದ್ದಾರೆ.
ಇದನ್ನೂ ಓದಿ: ಫರ್ಟಿಲಿಟಿ ಹೆಚ್ಚಿಸುವ ಸೂಪರ್ಫುಡ್ಗಳಿವು; ಪುರುಷ & ಮಹಿಳೆಯರು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ | Health Tips
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಿತ್ರ ನಿರ್ಮಾಪಕ ದಿಲ್ ರಾಜು ಗೇಮ್ ಚೇಂಚರ್ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. '' ಈ ಚಿತ್ರ 2 ತಾಸು 20 ನಿಮಿಷ ಇದೆ. ಈಗಾಗಲೇ ಈ ಚಿತ್ರನ್ನು ರಾಮ್ಚರಣ್ ತಂದೆ ಚಿರಂಜೀವಿ ನೋಡಿದ್ದಾರೆ. ಅವರು ಈ ಚಿತ್ರವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ರಾಮ್ ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿ ಮತ್ತು ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ'' ಎಂದು ಹೇಳಿದ್ದಾರೆ.
ನಿರ್ದೇಶಕ ಶಂಕರ್ ಗೇಮ್ ಚೇಂಜರ್ ಅವರ ಚೊಚ್ಚಲ ತೆಲುಗು ಚಿತ್ರ. ರಾಮ್ ಜೊತೆ ಕೆಲಸ ಮಾಡಿದ್ದು ಇದೇ ಮೊದಲು. ಕಿಯಾರಾ ಅಡ್ವಾಣಿ, ಅಂಜಲಿ, ಸೂರ್ಯ, ಶ್ರೀಕಾಂತ್, ಸುನೀಲ್, ಸಮುದ್ರಕಣಿ ಮತ್ತು ಜಯರಾಮ್ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಚಿತ್ರಕ್ಕೆ ಥಮನ್ ಎಸ್. ಸಂಗೀತ ಸಂಯೋಜಿಸಿದ್ದಾರೆ.(ಏಜೆನ್ಸೀಸ್).