ಜಿನಿವಾ: ಅಜ್ಜಿಗೆ ಅರಿವೆ ಚಿಂತೆ, ಮೊಮ್ಮಗಳಿಗೆ ಗಂಡನ ಚಿಂತೆ ಎಂಬ ಗಾದೆಯನ್ನು ನೆನಪಿಸುವಂಥ ವಾತಾವರಣವನ್ನು ಕೋವಿಡ್-19 ಕೆಲವರಿಗೆ ತಂದಿಟ್ಟಿತ್ತು ಎಂದರೂ ಅಚ್ಚರಿ ಏನಿಲ್ಲ. ಏಕೆಂದರೆ ಬಹುತೇಕ ಎಲ್ಲರೂ ಕರೊನಾಗೆ ಯಾವಾಗ ಲಸಿಕೆ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದರೆ ಒಂದಷ್ಟು ಮಂದಿಗೆ ಮಾತ್ರ ಅದರದ್ದೇ ಚಿಂತೆ ಆಗಿತ್ತಂತೆ!
ಹೌದು.. ದೇಶದ ಬಹುತೇಕ ಮಂದಿ ಲಸಿಕೆ ಸಿಗಲಿ ಎಂಬ ಆಶಯದಲ್ಲಿದ್ದರೆ ಒಂದಷ್ಟು ಮಂದಿ ಅದು ಸಿಗಲಿ ಎಂಬ ಆತುರದಲ್ಲಿದ್ದರಂತೆ. ಅರ್ಥಾತ್, ಗರ್ಭನಿರೋಧಕ ಮಾತ್ರೆ ಹಾಗೂ ಕಾಂಡಂ ಸಿಗದೆ ಭಾರತದಲ್ಲಿ ಹಲವರು ಪರದಾಡಿದ್ದರು ಎಂದು ಸಮೀಕ್ಷೆಯೊಂದು ಹೇಳಿದೆ.
ಜಾಯಿಂಟ್ ಯುನೈಟೆಡ್ ನೇಷನ್ಸ್ ಪ್ರೋಗ್ರಾಂ ಆನ್ ಎಚ್ಐವಿ/ಏಯ್ಡ್ಸ್ ವರದಿ ಪ್ರಕಾರ ಭಾರತದಲ್ಲಿ 2.5 ಕೋಟಿ ದಂಪತಿಗಳಿಗೆ ಗರ್ಭನಿರೋಧಕ ಸಾಮಗ್ರಿಗಳು ಸಿಗದೇ ಪೇಚಿಗೆ ಸಿಲುಕಿದ್ದರು ಎಂದು ಈ ಸಮೀಕ್ಷೆ ಹೇಳಿದೆ. ಪರಿಣಾಮ, ಶಿಶು ಜನನ ಪ್ರಮಾಣ ಸದ್ಯದಲ್ಲೇ ಹೆಚ್ಚಾಗುವ ಲಕ್ಷಣಗಳಿವೆ ಎಂದೂ ಈ ಸಮೀಕ್ಷೆ ಅಂದಾಜಿಸಿದೆ. (ಏಜೆನ್ಸೀಸ್)