ನ್ಯೂಸ್

25 ದಿನದ ಹೆಣ್ಣು ಮಗುವನ್ನು 30 ಸಾವಿರ ರೂ.ಗೆ ಮಾರಾಟ ಮಾಡಿದ ತಂದೆ! Infant Sold By Father

ಆಸ್ಸಾಂ: ( Infant Sold By Father ) ಮಕ್ಕಳು ಬೇಕು ಅಂತ ದೇವರಿಗೆ ಪೂಜೆ, ಹೋಮ ಹವನ, ವೃತ ಮಾಡುತ್ತಾರೆ. ಮಕ್ಕಳು ಬೇಕು ಎಂದು ಬೇಡಿಕೊಳ್ಳುವ ಜನರ ಮಧ್ಯೆ ಇಲ್ಲಿಯೊಬ್ಬ ದಂಪತಿ ತಮ್ಮ ಬಡತನ ನಿವಾರಣೆ ಮಾಡಿಕೊಳ್ಳಲು 25 ದಿನದ ಹಸುಗೂಸನ್ನು 30,000 ಸಾವಿರಕ್ಕಿ ಮಾರಾಟ ಮಾಡಿರುವ ಘಟನೆ ಬೆಳಕಿಗೆ ಬಂಧಿದ್ದು, ಮಕ್ಕಳ ಕಲ್ಯಾಣ ಇಲಾಖೆ ಮಂಗಳವಾರ ಮಗುವನ್ನು ರಕ್ಷಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಡು ಬಡತನದಿಂದ ಬಳಲುತ್ತಿದ್ದ ಅವರು ಹೊಟ್ಟೆ ತುಂಬಿಸಿಕೊಳ್ಳಲು ಮಗುವನ್ನು ಕರುಣೆಯಿಲ್ಲದೆ ಮಾರಿಬಿಟ್ಟರು. ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಈ ಭಯಾನಕ ಘಟನೆ ನಡೆದಿದೆ.

ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಅಕ್ಟೋಬರ್ 4 ರಂದು ದಿಬ್ರುಗಢ್‌ನಲ್ಲಿರುವ ಅಸ್ಸಾಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಪೋಷಕರಾದ ಬೋರಾ ಮತ್ತು ಸಬಿತಾ ಬೋರಾ ಬಡತನ ಮತ್ತು ಆರ್ಥಿಕ ಸಂಕಷ್ಟದಿಂದ ಬಳಲುತ್ತಿದ್ದಾರೆ. ಇದರೊಂದಿಗೆ ಹೆಣ್ಣು ಮಗುವೇ ಹೊರೆ ಎನಿಸಿತು. ಇದರಿಂದಾಗಿ 25 ದಿನದ ಮಗುವನ್ನು 30 ಸಾವಿರ ರೂ.ಗೆ ಮಾರಾಟ ಮಾಡಿದ್ದಾರೆ. ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿಸಿ) ತಕ್ಷಣ ಸ್ಪಂದಿಸಿ ಮಗುವನ್ನು ರಕ್ಷಿಸಿದೆ. ಅಧಿಕಾರಿಗಳು ಮಗುವನ್ನು ವೈದ್ಯರ ಮನೆಯಿಂದ ರಕ್ಷಿಸಿದ್ದಾರೆ.

ಮಕ್ಕಳ ಸಹಾಯವಾಣಿಗೆ ದೂರು ಬಂದ ನಂತರ ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಬಿಸಿ) ದೂರಿನ ಬಗ್ಗೆ ಪ್ರತಿಕ್ರಿಯಿಸಿದೆ.  ಮಗುವನ್ನು  30,000 ರೂ.ಗೆ ಮಾರಾಟ  ಮಾಡಲು ಯತ್ನಿಸಿದ್ದಾರೆ, ಇದರಿಂದಾಗಿ ಮಗುವನ್ನು ರಕ್ಷಿಸಲಾಗಿದ್ದು, ಸಿಲಾಪತ್ತರ್‌ನಲ್ಲಿರುವ ಡಾ.ಚಂದ್ರಜಿತ್ ಡೋಲ್ ಅವರ ಮನೆಯಿಂದ ಮಗುವನ್ನು ಹೊರತರಲಾಗಿದೆ. ಮಗುವಿನ ಪೋಷಕರನ್ನು ಗುರುತಿಸಲಾಯಿತು ಮತ್ತು ಅವರ ಬಳಿಗೆ ಬರಲು ಆದೇಶಿಸಲಾಯಿತು. ಮಗುವಿನ ಮಾರಾಟದಲ್ಲಿ ಮಗುವಿನ ಪೋಷಕರಾದ ಬೋರಾ ಮತ್ತು ದಿಲೀಪ್ ಸೈಕಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದ ತನಿಖೆಯನ್ನು ಅಧಿಕಾರಿಗಳು ಮುಂದುವರೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.