ನ್ಯೂಸ್

24ರಂದು ಅಂತಾರಾಷ್ಟ್ರೀಯ ಸಮ್ಮೇಳನ

ಮೈಸೂರು ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಆರ್‌ಐಟಿ) ಕಾಲೇಜು ವತಿಯಿಂದ ಅ.24ರಂದು ಸಂವಹನ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನ ಅಂತಾರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಎಂಆರ್‌ಐಟಿ ಕಾರ್ಯದರ್ಶಿ ನಂದಿನಿ ಎನ್.ಮೂರ್ತಿ ತಿಳಿಸಿದರು.

ಕಾಲೇಜಿನ ಕ್ಯಾಂಪಸ್‌ನಲ್ಲಿ ಅಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್ ಉದ್ಘಾಟಿಸುವರು. ಗೌರವ ಅತಿಥಿಗಳಾಗಿ ಯೂರೋಪಿನ ರೊಸ್ಸನ ಕ್ಯಾಪುಟೊ, ಬರ್ನಾಡ್ ಮಲಿಯಾ, ವಿಶೇಷ ಅತಿಥಿಗಳಾಗಿ ಎನ್‌ಎಂಐಟಿಯ ಡಾ.ಬಿ.ಡಿ.ಪರಮೇಶಾಚಾರಿ, ಎಂಐಟಿ ಡೀನ್ ಡಾ.ರವಿಚಂದ್ರ ಕುಲಕರ್ಣಿ, ಅಧ್ಯಕ್ಷತೆಯನ್ನು ಎಂಆರ್‌ಐಟಿ ಅಧ್ಯಕ್ಷ ಡಾ.ಚಂದನ ವಿದ್ಯಾಶಂಕರ್, ಖಜಾಂಚಿ ಡಾ.ರಾಮಲಿಂಗಯ್ಯ ಹಾಗೂ ತಾವು ವಹಿಸುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ 2500ಕ್ಕೂ ಹೆಚ್ಚು ಸಂಶೋಧನಾ ಪತ್ರಿಕೆಗಳು ಸಲ್ಲಿಕೆಯಾಗಿವೆ. ಆದರೆ ಸಮ್ಮೇಳನದಲ್ಲಿ 180 ತಾಂತ್ರಿಕ ಲೇಖನಗಳು ವಿಷಯ ಮಂಡನೆಯಾಗಲಿವೆ. ಸಂಶೋಧನಾ ವಿದ್ಯಾರ್ಥಿಗಳು, ವೃತ್ತಿಪರರಿಗೆ ಹೊಸ ಆವಿಷ್ಕಾರಾತ್ಮಕ ಕಲ್ಪನೆಗಳನ್ನು ಹಂಚಿಕೊಳ್ಳಲು, ಸಂವಹನ, ಕಂಪ್ಯೂಟರ್ ಸೈನ್ಸ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಇತ್ತೀಚಿನ ಸಾಧನೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಡಾ.ಕೆ.ಎಸ್.ಅಭಿನಂದನ್, ಉಪ ಪ್ರಾಂಶುಪಾಲ ಡಾ.ಎನ್.ನಕುಲ್, ಡಾ.ಜ್ಯೋತಿ ಇತರರು ಇದ್ದರು.