ನ್ಯೂಸ್

ಮೈಸೂರಿನ ಸೈಕಲ್‌ಪಟು ನವೀನ್ ಸೋಲಂಕಿಗೆ ಅರ್ಹತೆ

ಮೈಸೂರು: ಮೈಸೂರಿನ ಸೈಕಲ್‌ಪಟು ನವೀನ್ ಸೋಲಂಕಿ ಅವರು ರೇಸ್ ಅಕ್ರಾಸ್ ಇಂಡಿಯಾ ಸಂಸ್ಥೆ ಆಯೋಜಿಸಿದ್ದ ದೀರ್ಘ ಸೈಕ್ಲಿಂಗ್ ರೇಸ್‌ನಲ್ಲಿ ಅರ್ಹತಾ ಸ್ಥಾನ ಗಳಿಸಿದ್ದಾರೆ.

ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿದ್ದ ನವೀನ್ ಸೋಲಂಕಿ ಅವರು 3,758 ಕಿ.ಮೀ ದೂರವನ್ನು 10 ದಿನ 15 ಗಂಟೆ ಸಮಯ ತೆಗೆದುಕೊಂಡು ಪೂರೈಸಿದ್ದಾರೆ.

ಅ. 10ರಿಂದ ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಆರಂಭವಾದ ಈ ರೇಸ್ ಅನ್ನು ನವೀನ್ ಅವರು ಅ. 20ರಂದು ಮುಗಿಸಿದರು. ದೇಶ-ವಿದೇಶದಿಂದ ಇದರಲ್ಲಿ 15 ಮಂದಿ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿ ಸಿದ್ದರು. ಶ್ರೀನಗರದ ಪೋಲೋ ಗ್ರೌಂಡ್‌ನಿಂದ ಆರಂಭವಾದ ಇವರ ಪಯಣ, ಉದಂಪುರ, ಪಠಾಣ್‌ಕೋಟ್, ಜಲಂಧರ, ಲುದಿಯಾನ, ಹೊಸದಿಲ್ಲಿ, ಆಗ್ರಾ, ಗ್ವಾಲಿಯಾರ್, ನಾಗಪುರ, ಹೈದರಾಬಾದ್, ಕರ್ನೂಲ್, ಅನಂತಪುರ, ಬೆಂಗಳೂರು, ಕೃಷ್ಣಗಿರಿ, ಮಧುರೈ ಮೂಲಕ ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಂಡಿತು.

ರೇಸ್ ಆರಂಭವಾದಾಗ ನವೀನ್ ಅವರು ನಿತ್ಯ 370 ಕಿಮೀ ಪ್ರಯಾಣ ಮಾಡುತ್ತಿದ್ದರು. 3 ಗಂಟೆ ನಿದ್ರೆಗೆ ಮೀಸಲಿಡುತ್ತಿದ್ದರು. ಪ್ರತಿ ಸ್ಪರ‌್ಯ ಕೈಗೂ ಜಿಪಿಎಸ್ ಟ್ರ್ಯಾಕರ್ ಅಳವಡಿಸಲಾಗಿತ್ತುಘಿ. 15 ಕಡೆ ಚೆಕ್ಕಿಂಗ್ ಪಾಯಿಂಟ್ ನಿರ್ಮಿಸಲಾಗಿತ್ತುಘಿ. ಎಲ್ಲ ಸ್ಪರ್ಧಿಗಳು ಯಾವ ಸ್ಥಾನದಲ್ಲಿರುವರು ಎಂಬುದನ್ನು ಆನ್‌ಲೈನ್‌ನಲ್ಲೇ ನೋಡಬಹುದಾಗಿತ್ತು.