ನ್ಯೂಸ್

ಹೃದಯಾಘಾತಕ್ಕೆ ಪ್ರಾಣ ಬಿಟ್ಟಳು ಕೊಡಗಿನ 24 ವರ್ಷದ ನಿಲಿಕ

ಕೊಡಗು : 24 ವರ್ಷದ ಯುವತಿಯೊಬ್ಬಳು ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ. ಈ ಘಟನೆ ಮಡಿಕೇರಿ ತಾಲೂಕಿನ ನೆಲಜಿ ಗ್ರಾಮದಲ್ಲಿ ನಡೆದಿದೆ.

ನಿಲಿಕ ಪೊನ್ನಪ್ಪ (24) ಮೃತ ಯುವತಿಯಾಗಿದ್ದಾಳೆ. ಈಕೆ ನೆಲಜಿ ಗ್ರಾಮದ ಯುವತಿಯಾಗಿದ್ದಾಳೆ. ಇಂದು ಬೆಳಿಗ್ಗೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.

ಮಣವಟ್ಟಿರ ಪೊನ್ನಪ್ಪ ಅವರ ಮಗಳು ನಿಲಿಕ. ಇಂದು ಬೆಳಿಗ್ಗೆ ಹೃದಯಾಘಾತ ಸಂಭವಿಸಿ ಪ್ರಾಣ ಬಿಟ್ಟಿದ್ದಾಳೆ. ಈಕೆ ಸಾವಿನಿಂದ ಕುಟುಂಬಸ್ಥರು ಹಾಗೂ ಮಡಿಕೇರಿ ಜನರು ದುಖಃ ತಪ್ತರಾಗಿದ್ದಾರೆ.

ಹೃದಯ ಸಂಬಂಧಿ ಕಾಯಿಲೆಗಳ ಬಗ್ಗೆ ಮುನ್ನೆಚ್ಚರಿಕೆ

  • ನಿಯಮಿತ ಹೃದಯ ತಪಾಸಣೆ
  •  ಕೌಟುಂಬಿಕವಾಗಿ ಹೃದಯ ಸಂಬಂಧಿತ ಕಾಯಿಲೆಗಳನ್ನು ಹೊಂದಿದ್ದರೆ ಹೃದ್ರೋಗ ಶಾಸ್ತ್ರಜ್ಞರನ್ನು ಭೇಟಿ ಮಾಡಿ
  • ಜಡವಾದ ಜೀವನಶೈಲಿಯನ್ನು ಬದಲಾಯಿಸಬೇಕು
  • ಹೆಚ್ಚುವರಿ ಸಕ್ಕರೆ ಸೇವನೆಯನ್ನು ಬಿಡಿ, ಲಿಪಿಡ್‌ಗಳನ್ನು ಪರೀಕ್ಷಿಸಿಕೊಳ್ಳಿ ಹಾಗೂ ಕೊಬ್ಬಿನಾಂಶ ಹೆಚ್ಚಿಸುವ ಆಹಾರ ಸೇವನೆಯನ್ನು ನಿಯಂತ್ರಣದಲ್ಲಿರಿಸಿ.