ನ್ಯೂಸ್

ಬಿಸಿಲಿನ ತಾಪಕ್ಕೆ 24ಕ್ಕೂ ಹೆಚ್ಚು ಬಾವಲಿಗಳು ಸಾವು!

ಛತ್ತೀಸ್‌ಗಢ: ಕೊರ್ಬಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಕನಿಷ್ಠ 24 ಬಾವಲಿಗಳು ಸಾವನ್ನಪ್ಪಿವೆ ಎಂದು ಅರಣ್ಯ ಅಧಿಕಾರಿಯೊಬ್ಬರು ಮಾಹಿತಿ ಹಂಚಿಕೊಂಡಿದ್ದು, ವಿಪರೀತ ಬಿಸಿಲ ತಾಪಕ್ಕೆ ಬಾವಲಿಗಳು ಮೃತಪಟ್ಟಿರುವುದಾಗಿ ಹೇಳಿದ್ದಾರೆ.

ಭಾನುವಾರ ಪಾಲಿ ಅರಣ್ಯ ವ್ಯಾಪ್ತಿಯ ಪರ್ಸಾದ ಗ್ರಾಮದ ಕೊಳದ ಬಳಿ ಶವಗಳು ಪತ್ತೆಯಾಗಿವೆ ಎಂದು ಕಟ್ಘೋರಾ ವಿಭಾಗೀಯ ಅರಣ್ಯಾಧಿಕಾರಿ ಕುಮಾರ್ ನಿಶಾಂತ್ ತಿಳಿಸಿದ್ದಾರೆ. ಸಾವಿನ ಕಾರಣವನ್ನು ತಿಳಿಯಲು ಶವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಹೇಳಿದರು. ಅರಣ್ಯ ಸಿಬ್ಬಂದಿ ಮತ್ತು ಪಶುವೈದ್ಯರ ತಂಡ ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ಪರಿಶೀಲಿಸಿದೆ ಎಂದು ಅಧಿಕಾರಿ ಮಾಹಿತಿ ಹಂಚಿಕೊಂಡಿದ್ದಾರೆ.

"ಪ್ರಾಥಮಿಕವಾಗಿ, ಸಸ್ತನಿಗಳು ಶಾಖದ ಹೊಡೆತದಿಂದ ಮೃತಪಟ್ಟಿವೆ ಎಂದು ತೋರುತ್ತದೆ. ಆದರೆ ಮರಣೋತ್ತರ ಪರೀಕ್ಷೆಯ ನಂತರ ನಿಖರವಾದ ಕಾರಣವನ್ನು ಕಂಡುಹಿಡಿಯಲಾಗುವುದು" ಎಂದು ಹೇಳಿದ್ದಾರೆ,(ಏಜೆನ್ಸೀಸ್).