ಮೈಸೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಹಾಗೂ ಜಿಲ್ಲಾ ಘಟಕವು ಮಾರ್ಚ್ 23ಕ್ಕೆ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದಿರುವ ಸಾಧಕರಿಗೆ ‘ಶರಣ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಿದೆ.
ಸಮಾಜಕ್ಕೆ ಅನುಪಮಾ ಸೇವೆ ಸಲ್ಲಿಸಿರುವ ಎಚ್.ಎಸ್.ಹರಿಶಂಕರ್, ಜ್ಯೋತಿರ್ಲಿಂಗ ಗೌಡ ಪಾಟೀಲ್, ಎಂ.ಎ.ನೀಲಾಂಬಿಕಾ, ಪ್ರಭಾಮಣಿ, ಎಸ್.ಬಸವರಾಜ್ ಹಾಗೂ ಡಿ.ಜಿ.ಸೋಮಶೇಖರ್ ಮೂರ್ತಿ ಅವರಿಗೆ ‘ಶರಣ ಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.