ಚಿತ್ರದುರ್ಗ:ಚಿತ್ರದುರ್ಗ ರಾಷ್ಟ್ರೀಯ ಯೋಗ ಶಿಕ್ಷಣ ಕ್ರೀಡಾ ಮತ್ತು ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ ಹಾಗೂ ಮುರುಘಾಮಠದ ಆಶ್ರಯದಲ್ಲಿ ಮೇ 22ರಿಂದ ನಿತ್ಯ ಬೆಳಗ್ಗೆ 5.45ರಿಂದ 7ರವರೆಗೆ ಶ್ರೀ ಮಠದ ಬಸವೇಶ್ವರ ಸಭಾಂಗಣದಲ್ಲಿ ಶ್ರೀ ಯೋಗ-ಪ್ರಾಣಾಯಾ ಮ ಉಚಿತ ತರಬೇತಿ ತರಗತಿಗಳನ್ನು ನಿರಂತರವಾಗಿ ಏರ್ಪಡಿಸಲಾಗಿದೆ.
ಶ್ರೀಮಠದ ಆಡಳಿತ ಮಂಡಳಿ ಸದಸ್ಯ ಡಾ.ಶ್ರೀ ಬಸವಕುಮಾರ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷ ಶಿವಯೋಗಿ ಸಿ.ಕಳಸದ ಅವ ರು ಅಧ್ಯಕ್ಷತೆ ವಹಿಸವರು. ಸಂಘದ ಬಿ.ಆರ್.ಪ್ರಸನ್ನಕುಮಾರ್,ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ,ಆಯು ಷ್ ವೈದ್ಯಾಧಿಕಾರಿ ಟಿ.ಶಿವಕುಮಾರ್,ಯೋಗಾಚಾರ‌್ಯ ಎಲ್.ಎಸ್.ಚಿನ್ಮಯಾನಂದ,ಮುಖ್ಯಶಿಕ್ಷಕ ಕಡ್ಲೆಗುದ್ದು ಕೆ.ಎನ್.ಮಹೇಶ್ ಹಾಗೂ ಅಮೃತ ಆಯುರ್ವೇದ ಮೆಡಿಕಲ್ ಕಾಲೇಜಿನ ಎಂ.ತಿಪ್ಪೇಸ್ವಾಮಿ ಮುಖ್ಯಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂ.ಆರ್.ಮಂಜುನಾಥ್ ಹಾಗೂ ಎಲ್.ಎಸ್.ಬಸವರಾಜ್ ತರಗತಿ ನಡೆಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
-----