ನ್ಯೂಸ್

22ರಂದು ಮ್ಯಾರಥಾನ್ ಸ್ಪರ್ಧೆ - ಡಾ. ಮುದಕನಗೌಡರ

ಬೈಲಹೊಂಗಲ: ಪಟ್ಟಣದ ಎಂಎಸ್‌ಎಸ್‌ಆರ್ ಪ್ರೌಢಶಾಲೆ ಮೈದಾನದಲ್ಲಿ ಡಿ.22ರಂದು ಬೆಳಗ್ಗೆ 5.30ಕ್ಕೆ ಕೆಎ24 ಮ್ಯಾರಾಥಾನ್ ಸ್ಪರ್ಧೆ ಜರುಗಲಿದೆ ಎಂದು ಎಲುಬು ಕೀಲು ತಜ್ಞ ಡಾ. ಮಂಜುನಾಥ ಮುದಕನಗೌಡರ ಹೇಳಿದರು.

ಪಟ್ಟಣದ ಅನ್ನಪೂರ್ಣ ಮೋಟರ್ಸ್‌ನಲ್ಲಿ ಗುರುವಾರ ಸ್ಪರ್ಧೆಯ ಭಿತ್ತಿಪತ್ರ ಬಿಡುಗಡೆಗೊಳಿಸಿ ಮಾತನಾಡಿದರು. ಮಾ ಭಾರತಿ ಸೇವಾ ೌಂಡೇಶನ್ ಅನಿಗೋಳ ಹಾಗೂ ಬೈಲಹೊಂಗಲ ರೋಟರಿ ಕ್ಲಬ್ ಆಶ್ರಯದಲ್ಲಿ ದ್ವಿತೀಯ ಬಾರಿಗೆ ಗ್ರಾಮೀಣ ಪ್ರತಿಭೆಗಳ ಉತ್ತೇಜನಕ್ಕಾಗಿ ಸ್ಪರ್ಧೆ ಆಯೋಜಿಸಲಾಗಿದೆ. ಸುಮಾರು 1500 ಕ್ಕಿಂತ ಹೆಚ್ಚು ಪುರುಷ ಮತ್ತು ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ ಎಂದರು.

ಪೊಲೀಸ್ ಆಯುಕ್ತ ಇಡಾ ಮಾರ್ಟಿನ್ ಮಾರ್ಬನ್ಯಾಂಗ್ ಚಾಲನೆ ನೀಡಲಿದ್ದಾರೆ. ಅಂಗವಿಕಲರ ವಿಶ್ವಕಪ್ ಕ್ರಿಕೆಟ್ ತಂಡದ ತರಬೇತುದಾರ ಮಹಾಂತೇಶ ಕಿವಡಸನ್ನವರ ಆಗಮಿಸಲಿದ್ದಾರೆ. ಆಸಕ್ತರು ಡಿ.17ರ ಒಳಗಾಗಿ ಹೆಸರು ನೊಂದಾಯಿಸಬೇಕು. ವಿಜೇತರಿಗೆ ನಗದು ಬಹುಮಾನ ಇರಲಿದೆ ಎಂದರು.

ಮಾ ಭಾರತಿ ಸೇವಾ ೌಂಡೇಶನ್ ಅಧ್ಯಕ್ಷ ಸುನೀಲ ಮರಕುಂಬಿ, ರೋಟರಿ ಕ್ಲಬ್ ಅಧ್ಯಕ್ಷ ಮಹಾಂತೇಶ ಜಿಗಜಿನ್ನಿ, ಬಸವರಾಜ ಭರಮಣ್ಣವರ, ಮಹಾಂತೇಶ ತುರಮರಿ, ಶಂಭು ಹೂಲಿ, ಸುಭಾಸ ತುರಮರಿ, ನಾಗೇಶ ಮರಕುಂಬಿ, ಸಂತೋಷ ಹಡಪದ, ಸೂರಜ ಮತ್ತಿಕೊಪ್ಪ ಇದ್ದರು.