ನವದೆಹಲಿ: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಆಗಿರುವ ಪರಿಯಚ ಪ್ರೀತಿಯಾಗಿ, ಮ್ಉವೆಯಾಗಲು ದೇಶದ ಗಡಿ ರೇಖೆ ದಾಡಿರುವುದನ್ನು ನಾವು ಕೇಳಿದ್ದೇವೆ. ಹೀಗೆ ಇಲ್ಲೊಬ್ಬಳು ಮಹಿಳೆ ವಾಟ್ಸಾಪ್‌ನಲ್ಲಿ ಪರಿಚಯವಾದ ವ್ಯಕ್ತಿಗಾಗಿ ಜಮ್ಮುನಿಂದ ಪಾಕಿಸ್ತಾನಕ್ಕೆ ಹೋಗಿದ್ದಾಳೆ.
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ 22 ವರ್ಷದ ಮಹಿಳೆ ವಾಟ್ಸಾಪ್‌ನಲ್ಲಿ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಒಂದೂವರೆ ವರ್ಷದ ಮಗಳೊಂದಿಗೆ, ಪಾಕಿಸ್ತಾನಕ್ಕೆ ಬಂದಿದ್ದಾಳೆ.
ಪೂಂಚ್‌ನ ಖಾದಿ ಕರ್ಮದ ನಿವಾಸಿಯಾಗಿರುವ ಶಬ್ನಮ್ ಬಿ ಅವರು ಗುಲಾಮ್ ರುಬಾನಿ ಅವರನ್ನು ಮದುವೆಯಾಗಿದ್ದಾರೆ ಮತ್ತು ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದಾರೆ. ಮಹಿಳೆಯ ಪತಿ ಭಾನುವಾರ ನಾಪತ್ತೆ ದೂರು ನೀಡಿದ್ದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ವರದಿಗಳ ಪ್ರಕಾರ, ಮಹಿಳೆಯ ಸಂಬಂಧಿಕರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ ವ್ಯಕ್ತಿ ಈಕೆಗೆ ಸೋಶಿಯಕಲ್ ಮೀಡಿಯಾ ಮೂಲಕವಾಗಿ ಪರಿಚಯವಾಗಿದ್ದ. ಈಕೆಗೆ ಅವನ ಮೇಲೆ ಪ್ರೀತಿಯಾಗಿದೆ. ಮದುವೆಯಾಗುವುದಾಗಿ ಭರವಸೆ ನೀಡಿದ್ದಾನೆ. ಪ್ರೀಯಕರನಿಗಾಗಿ ಮಹಿಳೆ ತನ್ನ ದೊಡ್ಡ ಮಗಳನ್ನು ಮನಯಲ್ಲಿಯೆ ಬಿಟ್ಟು, ಚಿಕ್ಕ ಮಗಳ ಜತೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಈ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಳೆದ ವರ್ಷ ಸೀಮಾ ಹೈದರ್ ಎಂಬಾಕೆ ತನ್ನ ಮಕ್ಕಳನ್ನು ಕರೆದುಕೊಂಡು ಭಾರತದಲ್ಲಿರುವ ಸಚಿನ್ ಮೀನಾ ಅವರನ್ನು ಮದುವೆಯಾಗಲು ಪಾಕಿಸ್ತಾನದಿಂದ ಬಂದಿದ್ದರು. ಇತ್ತ ಮತ್ತೊಂದು ಘಟನೆಯಲ್ಲಿ ರಾಜಸ್ಥಾನದ ವಿವಾಹಿತ ಮಹಿಳೆ ಫೇಸ್ಬುಕ್ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು. ಎರಡು ಮಕ್ಕಳ ತಾಯಿಯಾದ ಅಂಜು ಜುಲೈ 2023ರಲ್ಲಿ ತನ್ನ ಫೇಸ್ಬುಕ್ ಸ್ನೇಹಿತ ನಸ್ರುಲ್ಲಾರನ್ನು ಮದುವೆಯಾಗಲು ಖೈಬರ್ ಪಖ್ತುಂಖ್ವಾಗೆ ಪ್ರಯಾಣ ಬೆಳೆಸಿದ್ದಳು. ಆಕೆ ತನ್ನ ಇಬ್ಬರು ಮಕ್ಕಳನ್ನು ಭಾರತದಲ್ಲೇ ಬಿಟ್ಟು ಹೋಗಿದ್ದಳು, ಆಕೆ ಇಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ರಾಜಸ್ಥಾನದ ಭಿವಾಡಿ ಪ್ರದೇಶದಲ್ಲಿ ವಾಸವಾಗಿದ್ದಳು.