ನ್ಯೂಸ್

41,932 ಸರ್ಕಾರಿ ಶಾಲೆಗಳಿಗೆ 22.47 ಕೋಟಿ ರೂ. ಶಾಲಾ ಅನುದಾನ  ಬಿಡುಗಡೆ| School Grants

ಬೆಂಗಳೂರು: ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 2024-25ನೇ ಸಾಲಿನ ಶಾಲಾ ಅನುದಾನ 22.47 ಕೋಟಿ ರೂ. ಬಿಡುಗಡೆ(22.47 crore Rs. Release of School Grants) ಮಾಡಿ ಸುತ್ತೋಲೆ ಹೊರಡಿಸಲಾಗಿದೆ.

41,932 ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಶೇ.20 ರಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ. 1 ರಿಂದ 30 ವಿದ್ಯಾರ್ಥಿಗಳಿರುವ 16,075 ಶಾಲೆಗಳಿಗೆ ತಲಾ 2 ಸಾವಿರ ರೂ. ಗಳಂತೆ 3,21,50,000 ರೂ., 31 ರಿಂದ 100 ವಿದ್ಯಾರ್ಥಿಗಳಿರುವ 14,703 ಶಾಲೆಗಳಿಗೆ ತಲಾ 5 ಸಾವಿರ ರೂ.ಗಳಂತೆ 7,35,15,000 ರೂ., 101 ರಿಂದ 250 ವಿದ್ಯಾರ್ಥಿಗಳಿರುವ 8028 ಶಾಲೆಗಳಿಗೆ ತಲಾ 10 ಸಾವಿರ ರೂ.ಗಳಂತೆ 8,02,80,000 ರೂ. 251 ರಿಂದ 1000 ವಿದ್ಯಾರ್ಥಿಗಳಿರುವ 2578 ಶಾಲೆಗಳಿಗೆ ತಲಾ 15 ಸಾವಿರ ರೂ.ಗಳಂತೆ 3,86,70,000 ರೂ. ಹಾಗೂ 1000 ವಿದ್ಯಾರ್ಥಿಗಳಿಗಿಂತ ಹೆಚ್ಚು ವಿದ್ಯಾರ್ಥಿಗಳಿರುವ 8 ಶಾಲೆಗಳಿಗೆ ತಲಾ 20 ಸಾವಿರ ರೂ.ಗಳಂತೆ 1,60,000 ರೂ. ಬಿಡುಗಡೆ ಮಾಡಲಾಗಿದೆ.

ಕಚೇರಿ ದಾಖಲೆ ಪುಸ್ತಕಗಳು, ಅಂಕಪಟ್ಟಿ, ಸೀಮೆ ಸುಣ್ಣ, ಡಸ್ಟರ್, ಬೋಧನೋಪಕರಣ ತಯಾರಿಕೆ/ಖರೀದಿ, ಕಟ್ಟಡದ ಸಣ್ಣಪುಟ್ಟ ದುರಸ್ತಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಪೀಠೋಪಕರಣ ದುರಸ್ತಿ, ಕ್ರೀಡಾ ಸಾಮಗ್ರಿ ಖರೀದಿ/ದುರಸ್ತಿ ಮತ್ತಿತರ ಕಾರ್ಯಗಳಿಗೆ ಈ ಅನುದಾನ ಬಳಸಿಕೊಳ್ಳಲು ಸೂಚಿಸಲಾಗಿದೆ.