ಅಂಬಿಕಾಪುರ: 21 ವರ್ಷದ ಯುವಕ ತಡರಾತ್ರಿ ದಂಪತಿಯ ಮನೆಗೆ ನುಗ್ಗಿ ಗಂಡನನ್ನು ಕೊಂದು, ಆತನ ಮೃತದೇಹದ ಹೆಂಡತಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಛತ್ತಿಸ್ಗಢದ ಅಂಬಿಕಾಪುರದಲ್ಲಿ ನಡೆದಿದೆ.
ಸುಖಲಾಲ್ ಮೃತ ದುರ್ದೆವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಕಾರ್ತಿಕ್ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಹಿನ್ನೆಲೆ:
ವಾಸ್ತವವಾಗಿ, ಸುಖಲಾಲ್ ತನ್ನ ಪತ್ನಿ ಕಾರ್ತಿಕ್ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಶಂಕಿಸಿದ್ದನು. ಸೋಮವಾರ ರಾತ್ರಿ ದಂಪತಿಗಳು ಮಲಗಿದ್ದ ವೇಳೆ ಆರೋಪಿಯು ಮನೆಗೆ ನುಗ್ಗಿದ್ದು, ಆಗ ದಂಪತಿಗಳ ನಡುವೆ ಜಗಳ ನಡೆದಿದೆ. ಇದಾದ ನಂತರ ಮೂವರ ನಡುವ ವಾಗ್ವಾದ ನಡೆದಿದ್ದು, ಈ ವೇಳೆ ಆರೋಪಿಯು ಸುಖಲಾಲ್ಗೆ ದೊಣ್ಣೆಯಿಂದ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇದಾದ ನಂತರ ಆರೋಪಿಯು,ಮಹಿಳೆಯನ್ನು ಬೆದರಿಸಿ ಅತ್ಯಾಚಾರ ಎಸಗಿದ್ದಾನೆ.
ಇನ್ನು ಘಟನೆ ಬಗ್ಗೆ ತಿಳಿಯುತ್ತಲೇ ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆರೋಪಿಯು ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್)