ಮೈಸೂರು: ಪ್ರೀತಿಸುವಂತೆ ಹಿಂದೆ ಬಿದ್ದ ಯುವಕನಿಂದ ಕಿರುಕುಳ ಅನುಭವಿಸಿದ್ದ ಯುವತಿ ಮನನೊಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗಣಗರಹುಂಡಿ ಗ್ರಾಮದಲ್ಲಿ ನಡೆದಿದೆ.
ಹರ್ಷಿತಾ(21) ಮೃತ ದುರ್ದೈವಿ. ಅದೇ ಗ್ರಾಮದಲ್ಲಿ ವಾಸವಿದ್ದ ಯುವಕ ಶಿವು( 26) ಕಿರುಕುಳ ನೀಡುತ್ತಿದ್ದನು. ಬೇಸತ್ತ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಇದನ್ನೂ ಓದಿ: ಪ್ರತಿಪಕ್ಷ ನಾಯಕನ ಆಯ್ಕೆ ನಾಳೆಗೆ ಮುಂದೂಡಿಕೆ!
ಪಿಯುಸಿ ಓದಿದ್ದ ಹರ್ಷಿತಾ ಕಂಪ್ಯೂಟರ್ ಕ್ಲಾಸ್ಗೆ ಹೋಗುತ್ತಿದ್ದಳು. ಹರ್ಷಿತಾಳನ್ನ ಲವ್ ಮಾಡುತ್ತಿದ್ದ ಶಿವು ಹಿಂದೆ ಬಿದ್ದು ಪ್ರೀತಸುವಂತೆ ಪೀಡಿಸುತ್ತಿದ್ದನಂತೆ. ಶಿವು ಮನವಿಯನ್ನ ಹರ್ಷಿತಾ ತಿರಸ್ಕರಿಸುತ್ತಿದ್ದಳು.
ಈ ಮಧ್ಯೆ ಹರ್ಷಿತಾ ಮನೆಯವರು ಮದುವೆ ಸಂಬಂಧ ನೋಡಿದ್ದರು. ಆಷಾಢ ನಂತರ ಮದುವೆ ದಿನಾಂಕ ಗೊತ್ತುಪಡಿಸಲು ನಿರ್ಧರಿಸಿದ್ದರು. ಈ ಮಾಹಿತಿ ಅರಿತ ಶಿವು ತನ್ನನ್ನ ಪ್ರೀತಿಸಿ ಮದುವೆ ಆಗುವಂತೆ ದುಂಬಾಲು ಬಿದಿದ್ದ. ಶಿವು ಕಿರುಕುಳಕ್ಕೆ ಬೇಸತ್ತ ಹರ್ಷಿತ ಹುಳುಗಳಿಗಾಗಿ ಇಟ್ಟಿದ್ದ ಮಾತ್ರೆಗಳನ್ನ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕೂಡಲೇ ಹರ್ಷಿತಾಳನ್ನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಹರ್ಷಿತಾ ಮೃತಪಟ್ಟಿದ್ದಾಳೆ. ಮಗಳ ಸಾವಿಗೆ ಶಿವು ಕಾರಣ ಎಂದು ಹರ್ಷಿತಾ ತಂದೆ ವೇಣುಗೋಪಾಲ್ ಇಲವಾಲ ಪೊಲೀಸ್ ಠಾಣೆಯಲ್ಲಿ ದೂರು. ಶಿವು ಬಂಧನಕ್ಕೆ ಇಲವಾಲ ಪೊಲೀಸರು ಜಾಲ ಬೀಸಿದ್ದಾರೆ.