ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ 
ನ್ಯೂಸ್

ಇಂದಿನಿಂದ 21 ದಿನಗಳ ವಿಶೇಷ ತರಬೇತಿ ಬೇಸಿಗೆ ಶಿಬಿರ

ಶಿವಮೊಗ್ಗ: ಗೋಪಾಳದ ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಸಂಕೀರ್ಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಆಶ್ರಯದಲ್ಲಿ 21 ದಿನಗಳ ವಿಶೇಷ ತರಬೇತಿ ಬೇಸಿಗೆ ಶಿಬಿರ ಆಯೋಜಿಸಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಸ್ವಾಮಿ ಹೇಳಿದರು.

ಮಾರ್ಚ್‌ನಲ್ಲಿ ನಡೆದ ಮೊದಲ ಶಿಬಿರ ಯಶಸ್ವಿಯಾಗಿದ್ದು, ಎರಡನೇ ಶಿಬಿರ ಏ. 2ರಿಂದ 26ರವರೆಗೆ ಮತ್ತು ಮೂರನೇ ಶಿಬಿರ ಮೇ 2ರಿಂದ 25ರವರೆಗೆ ಆಯೋಜಿಲಾಗಿದೆ. ಶಿಬಿರದಲ್ಲಿ 4 ವರ್ಷದಿಂದ ಎಲ್ಲ ವಯಸ್ಸಿನವರಿಗೆ ಈಜು ತರಬೇತಿ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
5ರಿಂದ 15 ವರ್ಷದವರೆಗಿನ ಮಕ್ಕಳಿಗೆ ಸ್ಕೇಟಿಂಗ್ ತರಬೇತಿ ಹಾಗೂ 6 ವರ್ಷದಿಂದ ಎಲ್ಲ ವಯಸ್ಸಿನವರಿಗೆ ಲಾನ್ ಟೆನ್ನಿಸ್ ತರಬೇತಿ ನೀಡಲು ತಯಾರಿ ಮಾಡಿಕೊಂಡಿದ್ದೇವೆ. 10 ವರ್ಷದೊಳಗಿನ ಮಕ್ಕಳ ಜತೆ ಪಾಲಕರು ಕಡ್ಡಾಯವಾಗಿ ಬರಬೇಕು. ಶಿಬಿರದಲ್ಲಿ ವಿಶೇಷವಾಗಿ ಶುಚಿತ್ವವನ್ನು ಶಿಬಿರಾರ್ಥಿಗಳು ಮತ್ತು ಪಾಲಕರು ಜವಾಬ್ದಾರಿಯಿಂದ ನಿರ್ವಹಿಸಬೇಕು ಎಂದು ಮನವಿ ಮಾಡಿದರು.
ತರಬೇತಿಗೆ ಒಂದು ಗಂಟೆ ಮಾತ್ರ ಅವಕಾಶ ಕಲ್ಪಿಸಿದ್ದು, ಈಜು ಮತ್ತು ಸ್ಕೇಟಿಂಗ್ ತರಬೇತಿಗೆ ಆಗಮಿಸುವವರು ಕಡ್ಡಾಯವಾಗಿ ತರಬೇತಿ ಸಂಬಂಧಿಸಿದ ಬಟ್ಟೆಗಳನ್ನು ಧರಿಸುವುದು ಮತ್ತು ಟೆನ್ನಿಸ್ ತರಬೇತಿಗೆ ರಾಕೆಟ್ ಮತ್ತು ಬಾಲ್‌ಗಳನ್ನು ತರಬೇಕು. ಮಾಹಿತಿಗೆ ಮೊಬೈಲ್ ಸಂಖ್ಯೆ 9743820293 ಸಂಪರ್ಕಿಸಬಹುದು ಎಂದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ (ಪ್ರಭಾರ) ಆರ್.ರಾಜು, ಸಿಮ್ಮಿಂಗ್ ಕೋಚ್ ವಿಶ್ವಾಸ್, ಟೆನ್ನಿಸ್ ಕೋಚ್ ಸಂಗಮೇಶ್, ಸ್ಕೇಟಿಂಗ್ ಕೋಚ್ ರಮೇಶ್, ಮಂಜುನಾಥ, ಕೇರ್ ಟೆಕರ್ ಸಚಿನ್ ಸುದ್ದಿಗೋಷ್ಠಿಯಲ್ಲಿದ್ದರು.