ಸೆಪ್ಟೆಂಬರ್ 11 ರಂದು ಬೆಳಿಗ್ಗೆ 10 ಗಂಟೆಯಿAದ ಗ್ರೀನ್ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ, ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ, ನಿಮಷಾಂಭ ನಗರ ಮೈಸೂರು ಇಲ್ಲಿ ಸಾಂಸ್ಕೃತಿಕ ಸ್ಪರ್ಧೆಯನ್ನು ಹಾಗೂ ಸೆಪ್ಟೆಂಬರ್ 13 ರಂದು ಬೆಳಿಗ್ಗೆ: 10 ಗಂಟೆಯಿoದ ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್ ಬಾದ್, ಮೈಸೊರು ಇಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಸಾಂಸ್ಕತಿಕ ಸ್ಪರ್ಧೆಗಳು: ಗಾಯನ ಸ್ಪರ್ಧೆ ಹಾಗೂ ಏಕ ಪಾತ್ರಾಭಿನಯ ಸ್ಪರ್ಧೆಯಲ್ಲಿ ಮಹಿಳೆಯರು /ಪುರುಷರು ಭಾಗವಹಿಸಬಹುದಾಗಿದ್ದು, 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರಾಗಿರಬೇಕು.
ಕ್ರೀಡಾ ಸ್ಪರ್ಧೆಗಳು: ಮ್ಯೂಸಿಕಲ್ ಚೇರ್, ಬಿರುಸಿನ ನಡಿಗೆ, ಬಕೆಟ್‌ನಲ್ಲಿ ಬಾಲ್ ಎಸೆಯುವುದು ಸ್ಪರ್ಧೆಯಲ್ಲಿ ಮಹಿಳೆಯರು /ಪುರುಷರು ಭಾಗವಹಿಸಬಹುದಾಗಿದ್ದು, 60 ರಿಂದ 69 ವರ್ಷ, 70 ವರ್ಷ ಹಾಗೂ ಮೇಲ್ಪಟ್ಟವರಾಗಿರಬೇಕು.
ಆಸಕ್ತ ಹಿರಿಯ ನಾಗರಿಕರು ಸಾಂಸ್ಕೃತಿಕ ಸ್ಪರ್ಧೆಗಳಿಗಾಗಿ ತಮ್ಮ ವಯಸ್ಸಿನ ಮಾಹಿತಿಯೊಂದಿಗೆ ಸೆಪ್ಟೆಂಬರ್ 10 ರಂದು ಸಂಜೆ 05 ರೊಳಗಾಗಿ ತಮ್ಮ ಹೆಸರನ್ನು ಖುದ್ದಾಗಿ ಅಥವಾ ದೂ.ಸಂ: 0821-2490333, ಪ್ರಭುಸ್ವಾಮಿ-7892178089 ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ಹಾಗೂ ಜಿಲ್ಲಾ ಮಟ್ಟದ ಕ್ರೀಡಾ ಸ್ಪರ್ಧೆಗಳಿಗಾಗಿ ಸೆಪ್ಟೆಂಬರ್ 10 ರಂದು ಸಂಜೆ 05 ರೊಳಗಾಗಿ ತಮ್ಮ ಹೆಸರನ್ನು ಖುದ್ದಾಗಿ ಅಥವಾ ದೂ.ಸಂ:0821-2490333, ಮಂಜುನಾಥ್-9742434753 ಮೂಲಕ ನೊಂದಾಯಿಸಿಕೊಳ್ಳಬಹುದಾಗಿದೆ. ಕಡ್ಡಾಯವಾಗಿ ಸ್ಪರ್ಧೆಯ ದಿನದಂದು ವಯಸ್ಸಿನ ದೃಢೀಕರಣವನ್ನು ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ. ಪುಲಿಕೇಶಿ ರಸ್ತೆ, ತಿಲಕ್ ನಗರ, ಮೈಸೂರು ದೂರವಾಣಿ ಸಂಖ್ಯೆ: 0821-2490333 ನ್ನು ಸಂಪರ್ಕಿಸಬಹುದಾಗಿದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.