ಹೈದರಾಬಾದ್: 'ಮತಕ್ಕಾಗಿ ಕಾಸು' ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ಅವರು ಅಕ್ಟೋಬರ್ 16 ರಂದು ಖುದ್ದು ಹಾಜರಾಗುವಂತೆ ನಗರ ನ್ಯಾಯಾಲಯ ಮಂಗಳವಾರ ನಿರ್ದೇಶಿಸಿದೆ.
ಇದನ್ನೂ ಓದಿ: Andhra Pradesh | ವೈಎಸ್ಆರ್ ಕಾಂಗ್ರೆಸ್ ಪಕ್ಷದ ನಾಯಕ ಆರ್. ಕೃಷ್ಣಯ್ಯ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ
2015ರಲ್ಲಿ ಶಾಸಕರೊಬ್ಬರಿಗೆ ಲಂಚ ನೀಡಿದ ಪ್ರಕರಣದಲ್ಲಿ ಈವರೆಗೂ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಹಣದ ಅಕ್ರಮ ವರ್ಗಾವಣೆ ಪ್ರಕರಣದವಾದ ಇದರ ತನಿಖೆಯನ್ನು ಜಾರಿ ನಿರ್ದೇಶನಾಲಯ ನಡೆಸುತ್ತಿದ್ದು ಇದೊಂದು ಮತಕ್ಕಾಗಿ ಕಾಸು ಪ್ರಕರಣದ ಎಂದಿದೆ.
ಈ ಪ್ರಕರಣದ ರೇವಂತ್ ರೆಡ್ಡಿ ಸೇರಿದಂತೆ ಇತರ ಐವರು ವಿಚಾರಣೆಗೆ ಹಾಜರಾಗುವಂತೆ ಮೆಟ್ರೋಪಾಲಿಟನ್ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು ನಿರ್ದೇಶಿಸಿದೆ. ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ 4ನೇ ಆರೋಪಿ ಹಾಜರಿದ್ದರೂ ರೇವಂತ್ ರೆಡ್ಡಿ ಸೇರಿದಂತೆ ಇತರರು ಗೈರಾಗಿದ್ದರು.
2015 ಮೇ 31 ರಂದು ರೇವಂತ್ ರೆಡ್ಡಿ ಅವರು ತೆಲುಗು ದೇಶಂ ಪಕ್ಷದಲ್ಲಿದ್ದರು. ನಾಮನಿರ್ದೇಶಿತ ಶಾಸಕ ಎಲ್ವಿಸ್ ಸ್ಟೀಫನ್‌ಸನ್‌ಗೆ 50 ಲಕ್ಷ ರೂಪಾಯಿ ಲಂಚ ನೀಡುತ್ತಿದ್ದಾಗ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇವರನ್ನು ಬಂಧಿಸಿತ್ತು, ಬಂಧಿತರಲ್ಲಿ ಇವರೊಂದಿಗೆ ಇನ್ನೂ ಹಲವರು ಇದ್ದರು. ಇವರೆಲ್ಲರಿಗೂ ನಂತರ ಜಾಮೀನು ಮಂಜೂರು ಆಗಿದೆ.
ಆರೋಪಿಗಳ ವಿರುದ್ಧ ಧ್ವನಿ ಮತ್ತು ವಿಡಿಯೋ ಸಾಕ್ಷಿಗಳಿವೆ ಎಂದು ಜೊತೆಗೆ 50 ಲಕ್ಷ ರೂ, ವಶಕ್ಕೆ ಪಡೆಯಲಾಗಿದೆ. ಎಂದು ಇಡಿ ಹೇಳಿತ್ತು. ಇದನನ್ನು ಆಧರಿಸಿ 2021ರಲ್ಲಿ ಸಿಎಂ ರೇವಂತ್ ರೆಡ್ಡಿ ಚಾರ್ಜ್ ಶೀಟ್ ಸಲ್ಲಿಕೆಯಾಗಿತ್ತು.