ನ್ಯೂಸ್

2,000 ರೂ. ನೋಟು ಇನ್ನೂ ಚಾಲ್ತಿಯಲ್ಲಿ; ಜನರ ಬಳಿಯಿವೆ 6,017 ಕೋಟಿ ರೂ. ಮೌಲ್ಯದ ನೋಟುಗಳು

ಮುಂಬೈ: ಆರ್​ಬಿಐ 2023ರ ಮೇ 19ರಂದು 2,000 ರೂ. ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆದಿದ್ದರೂ, 6,017 ಕೋಟಿ ರೂ. ಮೌಲ್ಯದಷ್ಟು ನೋಟುಗಳು ಇನ್ನೂ ಚಲಾವಣೆಯಲ್ಲಿವೆ. ಚಲಾವಣೆಯಿಂದ ವಾಪಸ್ ಪಡೆದ ಸಂದರ್ಭದಲ್ಲಿ 3.56 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳಿದ್ದವು.

ಇದರಲ್ಲಿ ಶೇ. 98.31ರಷ್ಟು ನೋಟುಗಳು ಬ್ಯಾಂಕಿಂಗ್ ವ್ಯವಸ್ಥೆಗೆ ವಾಪಸಾಗಿವೆ. 2,000 ರೂ. ನೋಟುಗಳು ಈಗಲೂ ಕಾನೂನುಬದ್ಧ. ಆರ್​ಬಿಐನ 19 ಕಚೇರಿಗಳಲ್ಲಿ ವಿನಿಮಯ ಸೌಲಭ್ಯ ಇದ್ದು, 2023ರ ಅ. 9ರಿಂದ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವ ಸೌಲಭ್ಯವನ್ನೂ ಒದಗಿಸಲಾಗಿದೆ. ಇಂಡಿಯಾ ಪೋಸ್ಟ್ ಮೂಲಕವೂ ನೋಟುಗಳನ್ನು ಆರ್​ಬಿಐ ಕಚೇರಿಗಳಿಗೆ ಕಳುಹಿಸಲು ಅವಕಾಶವಿದೆ.