ನ್ಯೂಸ್

ಇನ್ನೂ ಭಾರತದಲ್ಲೇ ಉಳಿದಿದ್ದ 200 ಪಾಕ್​ ಪ್ರಜೆಗಳನ್ನು ವಾಪಸ್​ ಕಳಿಸಲು ಸಿದ್ಧತೆ

ಲಾಹೋರ್​: ಕರೊನಾ ಲಾಕ್​ಡೌನ್​ ಕಾರಣದಿಂದಾಗಿ ಭಾರತದಲ್ಲಿ ಸಿಲುಕಿದ್ದ ಸುಮಾರು 200 ಪಾಕಿಸ್ತಾನಿ ಮಂದಿ ಸೆಪ್ಟೆಂಬರ್​ 3ರಂದು ವಾಪಸ್​ ತಮ್ಮ ದೇಶಕ್ಕೆ ಮರಳಲಿದ್ದಾರೆ.

ಮಾರ್ಚ್​ಗೂ ಮೊದಲು ಭಾರತಕ್ಕೆ ಆಗಮಿಸಿದ್ದ ಇವರೆಲ್ಲ ನಂತರ ವಾಪಸ್​ ಹೋಗಲಾಗದೆ ಉಳಿದಿದ್ದರು. ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿಗಳಲ್ಲಿ ಬೀಡುಬಿಟ್ಟಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿಯೇ ಸೆಪ್ಟೆಂಬರ್​ 3ರಂದು ವಾಘಾ-ಅತ್ತಾರಿ ಗಡಿ ದ್ವಾರವನ್ನು ತೆರೆಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಇಲ್ಲಿ ಸಿಲುಕಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್​ ಕಳಿಸುವಲ್ಲಿ ದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್​ ವಿಶೇಷ ಪ್ರಯತ್ನ ಮಾಡಿದೆ ಎಂದು ಹೇಳಲಾಗಿದೆ. ಸದ್ಯ ಆ ದೇಶದಲ್ಲಿ 2,95,636 ಕರೊನಾ ಸೋಂಕಿತರು ಇದ್ದು, 6288 ಮಂದಿ ಮೃತಪಟ್ಟಿದ್ದಾರೆ.