ಮೈಸೂರು ಜಿಲ್ಲಾ ದೇಹದಾರ್ಢ್ಯ ಮತ್ತು ಫಿಟ್ನೆಸ್ ಸಂಸ್ಥೆ ಹಾಗೂ ರಾಷ್ಟ್ರೀಯ ಶಿವಶಕ್ತಿ ಸೇನಾ ಪಡೆ, ಆರ್ನಾಲ್ಡ್ ಜಿಮ್‌ಗಳ ಸಂಯುಕ್ತಾಶ್ರಯದಲ್ಲಿ ಏ.20 ರಂದು ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಆಯೋಜಿಸಲಾಗಿದೆ.
ವಿಜಯನಗರ 2ನೇ ಹಂತ ರೈಲ್ವೆ ಬಡಾವಣೆ ಇಂದಿರಾ ನರ್ಸಿಂಗ್ ಹೋಂ ಮುಂಭಾಗದ ಮೈದಾನದಲ್ಲಿ ‘ಮಿಸ್ಟರ್ ಶಿವಶಕ್ತಿ ಸೇನಾ ಪ್ರಶಸ್ತಿ- 2025’ ಸೇರಿದಂತೆ ಮೊದಲಾದ ಪ್ರಶಸ್ತಿಗಾಗಿನ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆ ಕಾರ್ಯದರ್ಶಿ ಎಂ.ಮಂಜುನಾಥ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಲ್ಕು ವಿಭಾಗಳಲ್ಲಿ ಸ್ಪರ್ಧೆ ನಡೆಯಲಿದೆ. ಮಿಸ್ಟರ್ ಶಿವಶಕ್ತಿ ಸೇನಾ ಪ್ರಶಸ್ತಿ, ಮೋಸ್ಟ್ ಮಸ್ಕ್ಯುಲರ್, ಬೆಸ್ಟ್ ಫೋಸರ್ ಪ್ರಶಸ್ತಿಗಳನ್ನು ನೀಡಲಾಗುವುದು. ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ ಮತ್ತು ಹಾಸನ ಜಿಲ್ಲೆಗಳ ಸ್ಪರ್ಧಿಗಳು ಭಾಗವಹಿಸಹುದಾಗಿದೆ. ಹೆಚ್ಚಿನ ಮಾಹಿತಿಗೆ ಮೊ.ಸಂ.72048 73915 ನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಆಯೋಜಕರಾದ ಮಹಮ್ಮದ್ ಅಸ್ಲಂ, ನಾಗಭೂಷಣ್, ಅವಿನಾಶ್, ಯೋಗೇಶ್, ಅಮಿತ್, ಅನುಷ್ ಇದ್ದರು.