ನ್ಯೂಸ್

5 ದಿನ ಹಿಂದಿನ ಪಾಸ್ತಾ ತಿಂದ ವ್ಯಕ್ತಿ ಮೃತ್ಯು ಪ್ರಕರಣ; ವೈದ್ಯರು ಹೇಳಿದ್ದೇನು?

ಬೆಲ್ಜಿಯಂ: ಆಹಾರ ಹಾಳ್ಮಾಡಬಾರದು ಹಾಗೂ ಯಾರು ಅಡುಗೆ ಮಾಡ್ತಾರೆ ಎನ್ನುವ ಸೋಮಾರಿತನಕ್ಕೆ ಮಾಡಿಟ್ಟಿರುವ ಆಹಾರವನ್ನೇ ಮತ್ತೆ ಬಿಸಿ ಮಾಡಿ ತಿಂದು ಪ್ರಾಣ ಬಿಟ್ಟಿರುವ ಘಟನೆ ಬೆಲ್ಜಿಯಂನಲ್ಲಿ ನಡೆದಿದೆ.

ಬೆಲ್ಜಿಯಂನ ಯುವಕನೊಬ್ಬ ಹಳಸಿದ ಪಾಸ್ತಾ ತಿಂದು ಸಾವನ್ನಪ್ಪಿದ್ದಾನೆ. ಯುವಕನ ಸೋಮಾರಿತನ, ನಿರ್ಲಕ್ಷ್ಯವೇ ಆತನ ಪ್ರಾಣಕ್ಕೆ ಕುತ್ತು ತಂದಿದೆ ಎನ್ನಲಾಗಿತ್ತು. ಈ ಘಟನೆ ನಡೆದು ವರ್ಷಗಳೆ ಕಳೆದಿದ್ದರು ಈಗ ಮತ್ತೆ ವೈರಲ್ ಆಗಲು ಕಾರಣವೇನು ಎಂಬುದನ್ನು ನಾವು ಹೇಳ್ತೇವೆ.

ಯುವಕ ಒಂದೋ ಎರಡೋ ದಿನ ಹಿಂದಿನದಲ್ಲ ಬರೋಬ್ಬರಿ 5 ದಿನ ಹಿಂದಿನ ಪಾಸ್ತಾ ತಿಂದಿದ್ದಾನೆ. ಆತ ಐದು ದಿನಗಳ ಹಿಂದೆ ಪಾಸ್ತಾ ತಯಾರಿಸಿ ಹಾಗೆ ಕಿಚನ್ ನಲ್ಲಿ ಇಟ್ಟು ಪ್ರವಾಸಕ್ಕೆ ಹೋಗಿದ್ದ. ವಾಪಸ್ ಬಂದ್ಮೇಲೆ ಆತನ ಕಣ್ಣಿಗೆ ಪಾಸ್ತಾ ಕಾಣಿಸಿದೆ. ಅದಕ್ಕೆ ಟೊಮ್ಯಾಟೋ ಸಾಸ್ ಹಾಕಿ ಮತ್ತೆ ಬಿಸಿ ಮಾಡಿದ್ದಲ್ಲದೆ ಅದನ್ನು ಸೇವನೆ ಮಾಡಿದ್ದಾನೆ. ಅರ್ಧ ಗಂಟೆ ನಂತರ ಹೊಟ್ಟೆನೋವು ಕಾಣಿಸಿಕೊಂಡಿದೆ. ತಲೆನೋವು, ವಾಕರಿಕೆ, ಅತಿಸಾರ ಮತ್ತು ವಾಂತಿಯಂತಹ ಲಕ್ಷಣಗಳು ಕಾಣಿಸಿಕೊಂಡಿದೆ. ನೀರು ಕುಡಿದು ಮಲಗಿದ್ದಾನೆ. ಮರುದಿನ ಬೆಳಿಗ್ಗೆ ಎಷ್ಟು ಹೊತ್ತಾದ್ರೂ ಏಳದ ಕಾರಣ ತಂದೆ – ತಾಯಿ  ಬಾಗಿಲು ತೆರೆದು ಒಳಗೆ ಹೋದರೆ ಹಾಸಿಗೆ ಮೇಲೆ ಮಗನ ಶವ ಕಾಣಿಸಿದೆ.

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಐದು ದಿನಗಳ ಹಳೆಯ ಪಾಸ್ತಾ ತಿಂದ ಕಾರಣ ಯುವಕ ಸಾವನ್ನಪ್ಪಿದ್ದಾನೆ ಎಂದಿದ್ದಾರೆ. ಸೆಂಟ್ರಿಲೋಬ್ಯುಲರ್ ಲಿವರ್ ನೆಕ್ರೋಸಿಸ್ನಿಂದ ಬಳಲುತ್ತಿದ್ದನು. ಇದರಿಂದ ಅವನ ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಪಾಸ್ತಾವನ್ನು ದಿನಗಟ್ಟಲೆ ಹೊರಗೆ ಇಡಲಾಗಿರುವುದರಿಂದ, ಬ್ಯಾಕ್ಟೀರಿಯಾವು ಬೆಳೆಯಲು ಕಾರಣವಾಯಿತು ಎಂದಿದ್ದಾರೆ. ಬೆಲ್ಜಿಯಂನಲ್ಲಿ ನಡೆದ ಘಟನೆ ಹಳೆಯದು. ಫ್ರೈಡ್ ರೈಸ್ ಸಿಂಡ್ರೋಮ್​​​ ಹೆಚ್ಚಾಗಿರುವ ಕಾರಣ ಈಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಅದು ಹರಿದಾಡುತ್ತಿದೆ.

ಡಾ. ಬರ್ನಾರ್ಡ್ ಅವರು ವಿಡಿಯೋದಲ್ಲಿ ಈ ಪ್ರಕರಣವನ್ನು ವಿವರಿಸಿದ್ದಾರೆ "ಅನೇಕ ಜನರು ಪಾಸ್ತಾ ಅಥವಾ ನೂಡಲ್ಸ್ ಅನ್ನು ತಿನ್ನುತ್ತಾರೆ, ಅದು ಒಂದು ದಿನ ಅಥವಾ ಎರಡು ದಿನಗಳವರೆಗೆ ಉಳಿದಿದೆ ಎಂದು ಮತ್ತೆ ಸೇವಿಸುತ್ತಾರೆ. ಕೆಲವು ಗಂಟೆಗಳಿಗಿಂತ ಹೆಚ್ಚು ಕಾಲ ಆಹಾರದ ಬಗ್ಗೆ ಜಾಗರೂಕರಾಗಿರುವುದು ಉತ್ತಮ." ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ವೇಳೆ 5 ದಿನದ ಹಿಂದಿನ ಪಾಸ್ತಾ ತಿಂದು ಸಾವನ್ನಪ್ಪಿರುವ ಪ್ರಕರಣ ಬೆಳಕಿಗೆ ಬಂದಿದೆ.

ಫ್ರೈಡ್ ರೈಸ್ ಸಿಂಡ್ರೋಮ್ ಎಂದರೇನು?: ಶೇಖರಿಸಿದ ಆಹಾರವನ್ನು ಮತ್ತೆ ಬಿಸಿಮಾಡಿ ಅದೇ ಆಹಾರವನ್ನು ಸೇವಿಸುವುದರಿಂದ ಅನಾರೋಗ್ಯ ಉಂಟಾಗಬಹುದು. ಇದು ಅಕ್ಕಿ, ಆಲೂಗಡ್ಡೆ ಮತ್ತು ಪಾಸ್ತಾವನ್ನು ಒಳಗೊಂಡಿರಬಹುದು. ಬೇಯಿಸಿದ ಆಹಾರವನ್ನು ಕೋಣೆಯ ಉಷ್ಣಾಂಶದಲ್ಲಿ ಹೆಚ್ಚು ಸಮಯ ಇಡಲಾಗುತ್ತದೆ, ಬ್ಯಾಕ್ಟೀರಿಯಾಗಳು ತಗುಲುತ್ತದೆ. ಈ ಆಹಾರವನ್ನು ತಿನ್ನಲು ಅಸುರಕ್ಷಿತವಾಗಿಸುವ ಸಾಧ್ಯತೆ ಹೆಚ್ಚು. ಸೇವಿಸಿದ ನಂತರ ಕರುಳಿನಲ್ಲಿ ಈ ವಿಷವಾಗಿ ರೂಪುಗೊಳ್ಳಬಹುದು, ಮೀನು, ಮಾಂಸ,  ಸೂಪ್‌ಗಳು ಮತ್ತು ಡೈರಿಗಳ ಸಂದರ್ಭದಲ್ಲಿಯೂ ಇದು ಸಂಭವಿಸಬಹುದು.

ಆಹಾರದ ಸುರಕ್ಷಿತ ಸೇವನೆಯನ್ನು ಖಚಿತಪಡಿಸಿಕೊಳ್ಳುವುದು ಹೇಗೆ? : National Health Service ಪ್ರಕಾರ, ಆಹಾರ ಬೇಯಿಸಿದ ತಕ್ಷಣ ಅನ್ನವನ್ನು ತಕ್ಷಣವೇ ಸೇವಿಸದಿದ್ದರೆ, ಅದನ್ನು ಒಂದು ಗಂಟೆಯೊಳಗೆ ತಂಪಾಗಿಸಬೇಕು ಮತ್ತು ಫ್ರಿಜ್ನಲ್ಲಿ ಸಂಗ್ರಹಿಸಬೇಕು. ಇದನ್ನು ಒಂದಕ್ಕಿಂತ ಹೆಚ್ಚು ಬಾರಿ ಮತ್ತೆ ಬಿಸಿ ಮಾಡಬಾರದು. ಮತ್ತು ಮತ್ತೆ ಬಿಸಿ ಮಾಡಿದರೂ ಸಹ ಅದು ಅನಾರೋಗ್ಯ ಉಂಟು ಮಾಡಬಹುದು. ಒಂದಕ್ಕಿಂತ ಹೆಚ್ಚು ಬಾರಿ ಆಹಾರ ಬೆಚ್ಚಗಾಗಬಾರದು.