ಉತ್ತರಪ್ರದೇಶದ ಬಹ್ರೈಚ್ನ ಕಡಿಯಾಲ ನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ 20 ಜನರು ನಾಪತ್ತೆಯಾಗಿದ್ದಾರೆ ಎಂದು ಬುಧವಾರ(ಅ.29) ವರದಿಯಾಗಿದೆ.
ಭರ್ತಾಪುರ ಗ್ರಾಮಸ್ಥರು ಖೈರಾಟಿಯಾ ಮಾರುಕಟ್ಟೆಯಲ್ಲಿ ಶಾಪಿಂಗ್ ಮುಗಿಸಿ ಹಿಂತಿರುಗುತ್ತಿದ್ದರು. ದೋಣಿಯಲ್ಲಿ 26 ಗ್ರಾಮಸ್ಥರಿದ್ದರು. ಅವರಲ್ಲಿ ನಾಲ್ವರು ಈಜಿಕೊಂಡು ಸುರಕ್ಷಿತ ಸ್ಥಳಕ್ಕೆ ಬಂದಿದ್ದು, ಉಳಿದವರು ಕಾಣೆಯಾಗಿದ್ದಾರೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಸಂಜೆ 6 ಗಂಟೆ ಸುಮಾರಿಗೆ ಗ್ರಾಮಕ್ಕೆ ಹಿಂತಿರುಗುತ್ತಿದ್ದಾಗ, ನದಿಯಲ್ಲಿ ಬಲವಾದ ಪ್ರವಾಹದಿಂದಾಗಿ ದೋಣಿ ಇದ್ದಕ್ಕಿದ್ದಂತೆ ಮಗುಚಿಬಿದ್ದಿದೆ ಎಂದು ವರದಿ ಉಲ್ಲೇಖಿಸಿದ್ದಾರೆ.
ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳನ್ನು ತಕ್ಷಣ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಯುಪಿ ಪೊಲೀಸ್ ಮಹಾನಿರ್ದೇಶಕ ಕಚೇರಿ ಮಾಹಿತಿ ನೀಡಿದೆ.(ಏಜೆನ್ಸೀಸ್)