ವಿಜಯಪುರ: ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರುತ್ತಿರುವ ವೇಗ ಭಯ ಹುಟ್ಟಿಸುವಂತಿದೆ. ಒಂದೇ ಏರಿಯಾದಲ್ಲಿ 20 ಕರೊನಾ ವೈರಸ್ ಪೀಡಿತರು ಪತ್ತೆಯಾಗಿದ್ದಾರೆ.
5 ಕುಟುಂಬಗಳಿಂದ ಒಟ್ಟು 20 ಮಂದಿಗೆ ಸೋಂಕು ತಗುಲಿದೆ. ಇವರೆಲ್ಲ ಸಂಬಂಧಿಕರು. ಈಗ ಕರೊನಾ ಸೋಂಕಿತ ಕುಟುಂಬಗಳನ್ನೇ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ.
ಹಾಗೇ ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರನ್ನು ಗುರುತಿಸಿ ಕ್ವಾರಂಟೈನ್ಗೆ ಒಳಪಡಿಸುವ ಕಾರ್ಯವೂ ನಡೆಯುತ್ತಿದೆ.
ಸರ್ಕಾರಿ ಸಾರಿಗೆ ಬಸ್ಗಳಲ್ಲಿ ಸುಮಾರು 200 ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಿ, ಕ್ವಾರಂಟೈನ್ನಲ್ಲಿ ಇಡಲಾಗಿದೆ. ಎಲ್ಲರೂ ಸೇರಿ 1000 ಜನರ ಗಂಟಲು ದ್ರವ ಮಾದರಿ ಪರೀಕ್ಷೆ ಮಾಡಲು ನಿರ್ಧರಿಸಲಾಗಿದೆ. (ದಿಗ್ವಿಜಯ ನ್ಯೂಸ್)