ಬೆಂಗಳೂರು:
ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಎಂಎ್ ನಂದಿನಿ ಉತ್ಪನ್ನಗಳಿಗೆ ಶೇ.20 ರಿಯಾಯಿತಿ ನೀಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಚಾಲನೆ ನೀಡಿ, ಶುಭ ಹಾರೈಸಿದರು.
ನಂದಿನಿ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಲ್ಲಿ ಅರಿವು ಮೂಡಿಸುವ ಸಲುವಾಗಿ ಕಳೆದ 5 ವರ್ಷಗಳಿಂದ ರಾಜ್ಯದ್ಯಾಂತ ವರ್ಷದಲ್ಲಿ ಎರಡು ಬಾರಿ ನಂದಿನಿ ಸಿಹಿ ಉತ್ಸವ ವಿಶೇಷ ಆಚರಣೆ ಮಾಡಲಾಗುತ್ತಿದೆ ಎಂದು ಕೆಎಂಎ್ ಅಧಿಕಾರಿಗಳು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಸಾಲು ಹಬ್ಬಗಳು ಬರುವ ಪ್ರಯುಕ್ತ ಗ್ರಾಹಕರಿಗೆ ಅನುಕೂಲವಾಗಲಿ ಎಂದು ಈ ಯೋಜನೆ ಜಾರಿಗೆ ತರಲಾಗಿದ್ದು, ಇಂದಿನಿಂದ ಸೆ.20 ರವರೆಗೂ ಜಾರಿಯಲ್ಲಿರಲಿದೆ.
ಮೈಸೂರು ಪಾಕ್, ಹಾಲಿನ ಪೇಡಾ, ಧಾರವಾಡ ಪೇಡ, ಕೇಸರ್ ಪೇಡ, ಏಲಕ್ಕಿ ಪೇಡ, ಕೋಕೋನಟ್, ಚಾಕೋಲೇಟ್ ಬರ್ಫಿಗಳು, ಕುಂದ, ಜಾಮೂನ್ ರಸಗುಲ್ಲಾ, ಸಿರಿಧಾನ್ಯ ಲಾಡು, ಸಿರಿಧಾನ್ಯ ಹಾಲಿನ ಪುಡಿ, ಗೋಧಿ ಲಾಡು, ಕುಕ್ಕೀಸ್ ಮತ್ತು ಎಲ್ಲಾ ಸಿಹಿ ಉತ್ಪನ್ನಗಳ ಮಾರಾಟ ದರದ ಮೇಲೆ ಶೇ.20 ರಷ್ಟು ರಿಯಾಯಿತಿಯಲ್ಲಿ ನಂದಿನಿ ಮಳಿಗೆಯಲ್ಲಿ ಲಭ್ಯವಿರಲಿದೆ.
ನಂದಿನಿ ಹೊಸ ಉತ್ಪನ್ನಗಳಾದ ಬೆಲ್ಲದ ಪೇಡ, ಸೈಫಲ್ ಹಾಲಿನ ಬರ್ಫಿ, ಚಾಕೊಲೇಟ್, ಕುಕ್ಕಿಸ್, ಕಡಲೇ ಬೀಜ ಹಾಗೂ ಬೆಲ್ಲದ ಜೊತೆಗೆ ವಿಶೇಷವಾಗಿ ನಂದಿನಿ ಖೋವಾ ಸೇರಿ ತಯಾರಿಸಲಾಗಿರುವ ’ಖೋವ ಕಡಲೆ ಮಿಟಾಯಿ’ ಅನ್ನು ಸಹ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಕೆಎಂಎ್ ಅಧ್ಯಕ್ಷ ಭೀಮನಾಯ್ಕ, ವ್ಯವಸ್ಥಾಪಕ ನಿರ್ದೇಶಕರಾದ ಎಂ.ಕೆ.ಜಗದೀಶ್ ಮತ್ತು ಕೆಎಂಎ್ ಹಿರಿಯ ಅಧಿಕಾರಿಗಳು ಹಾಜರಿದ್ದರು.