ನ್ಯೂಸ್

ಮೇವಿನ ಕಿಟ್ ವಿತರಣೆಗೆ 20 ಕೋಟಿ ರೂ. ಬಿಡುಗಡೆ

ಬೆಂಗಳೂರು: ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮೇವಿನ ಕೊರತೆ ನೀಗಿಸಲು ರೈತರಿಗೆ ಉಚಿತ ಮಿನಿ ಮೇವಿನ ಕಿಟ್ ವಿತರಿಸಲು ಸರ್ಕಾರ ಪಶುಪಾಲನಾ ಇಲಾಖೆಗೆ 20 ಕೋಟಿ ರೂ. ಬಿಡುಗಡೆ ಮಾಡಿದೆ.

ಹಾಲು ನೀಡುವ ರಾಸು ಹೊಂದಿರುವ ಹಾಗೂ ನೀರಾವರಿ ಮೂಲ ಹೊಂದಿರುವ ಅರ್ಹ ರೈತರಿಗೆ ಆದ್ಯತೆ ಮೇರೆಗೆ ಪ್ರಮುಖವಾಗಿ ಹಾಲು ಉತ್ಪಾದಕರ ಸಹಕಾರ ಸಂಘಗಳು ಹಾಗೂ ಗ್ರಅಮ ಪಂಚಾಯಿತಿಗಳ ಮೂಲಕ ಹಾಗೂ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು, ಪಶುಪಾಲನಾ ಇಲಾಖೆ ಆಯುಕ್ತರು ಮೇಲುಸ್ತುವಾರಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ

ಪಾರದರ್ಶಕತೆ ಕಾಯ್ದೆಯಡಿ ಮೀವಿನ ಕಿಟ್ ಖರೀದಿಸಲು ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.