ನ್ಯೂಸ್

ಚೆನ್ನಾಗಿ ನಿದ್ರಿಸಲು AC ಆನ್ ಮಾಡಿದ ವೈದ್ಯರು; ಶಾಶ್ವತವಾಗಿ ಮಲಗಿದ ಮುದ್ದು ಕಂದಮ್ಮಗಳು..!

ಉತ್ತರಪ್ರದೇಶ: ಉತ್ತರಪ್ರದೇಶದ ಶಾಮ್ಲಿ ಜಿಲ್ಲೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಏನೂ ಅರಿಯದ ಎರಡು ನವಾಜಾತ ಶಿಶುಗಳು ಸಾವನ್ನಪಿರುವ ಘಟನೆ ವರದಿಯಾಗಿದೆ.
ನವಜಾತ ಶಿಶುಗಳು ಶೀತದ ವಾತವರಣ ಹೆಚ್ಚಾಗಿ ಸಾವನ್ನಪ್ಪಿವೆ, ಏಕೆಂದರೆ ವೈದ್ಯರು ರಾತ್ರಿಯಿಡೀ ಚೆನ್ನಾಗಿ ನಿದ್ದೆ ಮಾಡಲು ಬಯಸಿದ್ದರಿಂದ ಎಸಿಯನ್ನು ಆನ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವೈದ್ಯರು ಎಸಿ ಆನ್​ ಮಾಡಿದ್ದೇ ಎರಡು ಮಗಿವಿನ ಸಾವಿಗೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.


ನವಜಾತ ಶಿಶುಗಳ ಕುಟುಂಬಗಳು ಶನಿವಾರ ಕ್ಲಿನಿಕ್‌ನ ಮಾಲೀಕ ಡಾಕ್ಟರ್ ನೀತು ಅವರು ಚೆನ್ನಾಗಿ ನಿದ್ದೆ ಮಾಡಲು ಬಯಸಿದ್ದರಿಂದ ಹವಾನಿಯಂತ್ರಣವನ್ನು (ಎಸಿ) ರಾತ್ರಿಯಿಡೀ ಆನ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಮರುದಿನ ಬೆಳಗ್ಗೆ ಶಿಶುಗಳು ಶವವಾಗಿ ಪತ್ತೆಯಾಗಿವೆ.


ಮಕ್ಕಳ ಕುಟುಂಬಗಳು ನೀಡಿದ ದೂರಿನ ಮೇರೆಗೆ ನೀತು ವಿರುದ್ಧ ಐಪಿಸಿಯ ಸೆಕ್ಷನ್ 304 (ಕೊಲೆಗೆ ಸಮಾನವಲ್ಲದ ಅಪರಾಧಿ ನರಹತ್ಯೆಗೆ ಶಿಕ್ಷೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಶಾಮ್ಲಿ ಜಿಲ್ಲೆಯ ಎಸ್‌ಎಚ್‌ಒ ನೇತ್ರಪಾಲ್ ಸಿಂಗ್ ಹೇಳಿದ್ದಾರೆ.


ಘಟನೆಯ ಕುರಿತಂತೆ ಸರಿಯಾದ ತನಿಖೆ ನಡೆಸಬೇಕೆಂದು ಆರೋಗ್ಯ ಇಲಾಖೆಯೂ ಆದೇಶಿಸಿದೆ.


ಇನ್ನು ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಮುಖ್ಯ ವೈದ್ಯಕೀಯ ಅಧಿಕಾರಿ (ಎಸಿಎಂಒ) ಡಾ ಅಶ್ವನಿ ಶರ್ಮಾ ತಿಳಿಸಿದ್ದಾರೆ.


ಕುಟುಂಬಸ್ಥರು ನೀಡಿರುವ ದೂರಿನ ಪ್ರಕಾರ, ಶನಿವಾರ ಕೈರಾನಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಶುಗಳು ಜನಿಸಿದ್ದು, ನಂತರ ಅದೇ ದಿನ ಖಾಸಗಿ ಕ್ಲಿನಿಕ್‌ಗೆ ಸ್ಥಳಾಂತರಿಸಲಾಗಿದೆ. ಎರಡೂ ನವಜಾತ ಶಿಶುಗಳನ್ನ ಚಿಕಿತತ್ಸೆಗಾಗಿ, ಫೋಟೊಥೆರಪಿ ಘಟಕದಲ್ಲಿ ಇರಿಸಲಾಗಿತ್ತು.


ಕ್ಲಿನಿಕ್‌ನ ಮಾಲೀಕ ಡಾಕ್ಟರ್ ನೀತು ಶನಿವಾರ ರಾತ್ರಿ ಮಲಗಲು ಹವಾನಿಯಂತ್ರಣವನ್ನು ಸ್ವಿಚ್ ಆನ್ ಮಾಡಿದ್ದಾರೆ. ಮರುದಿನ ಬೆಳಿಗ್ಗೆ ಕುಟುಂಬಸ್ಥರು ಮಕ್ಕಳನ್ನು ನೋಡಲು ತೆರಳಿದಾಗ, ಫೋಟೊಥೆರಪಿ ಘಟಕದಲ್ಲಿ ಇರಿಸಲಾಗಿದ್ದ ಮಕ್ಕಳಿಬ್ಬರೂ ಶವವಾಗಿ ಪತ್ತೆಯಾಗಿದ್ದಾರೆ. ಸದ್ಯ ಪ್ರಕರಣದ ಕುರಿತಂತೆ ಪೊಲೀಸರು ಆಸ್ಪತ್ರೆಯ ವೈದ್ಯ ನೀತು ಅವರ ತನಿಖೆ ನಡೆಸುತ್ತಿದ್ದಾರೆ.