ನ್ಯೂಸ್

ಬರ್ಡ್ ಮ್ಯಾರಥಾನ್​ನಲ್ಲಿ ಎರಡು ಹೊಸ ಪಕ್ಷಿ ಗುರುತು

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರ ಸುತ್ತ ನಡೆದ ಪಕ್ಷಿ ಗಣತಿ 10ನೇ ಆವೃತ್ತಿಯಲ್ಲಿ 2 ಹೊಸ ಪಕ್ಷಿಗಳನ್ನು ಗುರುತಿಸಲಾಗಿದೆ.

ಕೈಗಾ ಕೇಂದ್ರದ ಪರಿಸರ ಮುಂದಾಳತ್ವದಲ್ಲಿ ಆಯೋಜಿಸಿದ್ದ ಬರ್ಡ್ ಮ್ಯಾರಥಾನ್​ನಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯ, ವೈಲ್ಡ್ ಲೈಫ್ ಇನ್ಸಿ್ಟಟ್ಯೂಟ್ ಆಫ್ ಇಂಡಿಯಾ, ಅರಣ್ಯ ಇಲಾಖೆ, ಮಾಲಿನ್ಯ ನಿಯಂತ್ರಣ ಮಂಡಳಿ, ಆಸಕ್ತ ಕೈಗಾ ನೌಕರರು ಹಾಗೂ ಅವರ ಕುಟುಂಬಸ್ಥರು ಸೇರಿ 140 ಪಕ್ಷಿ ಪ್ರಿಯರು ಕಾಡಿಗಿಳಿದು ಇಡೀ ದಿನ ದಾಖಲಾತಿ ನಡೆಸಿದರು. ಈ ವೇಳೆ ಚೊಟ್ಟೆ ಎಲೆ ಉಯಿಲಕ್ಕಿ ಅಥವಾ ವೆಸ್ಟರ್ನ್ ಕ್ರೌನ್ ರ್ವ್ಲಬರ್ ಹಾಗೂ ಕಿರು ಕಾಜಾಣ ಅಥವಾ ಲೀಸರ್ ಕೆಸ್ಟ್ರೆಲ್ ಎಂಬ ಎರಡು ಹೊಸ ಪಕ್ಷಿಗಳನ್ನು ಗುರುತಿಸಲಾಯಿತು. 10 ವರ್ಷದಲ್ಲಿ ಕೈಗಾ ಸುತ್ತ 290 ಪಕ್ಷಿ ಪ್ರಭೇದಗಳಿರುವುದನ್ನು ಬರ್ಡ್ ಮ್ಯಾರಥಾನ್ ಮೂಲಕ ಗುರುತಿಸಿದಂತಾಗಿದೆ.