ಅಮೆರಿಕದ ಮಾರಾಟದಲ್ಲಿ (ಔಟ್ಪುಟ್) 396 ಬಿಲಿಯನ್ ಡಾಲರ್, 16 ಲಕ್ಷ ಉದ್ಯೋಗಗಳು ಮತ್ತು ಅಲ್ಲಿನ ಆರ್ಥಿಕತೆಗೆ 198 ಬಿಲಿಯನ್ ಡಾಲರ್ ಕೊಡುಗೆ ನೀಡಿವೆ. ಇದು 2021ರಲ್ಲಿ ಅಮೆರಿಕದ 20 ರಾಜ್ಯಗಳ ಒಟ್ಟು ಆರ್ಥಿಕತೆಗಿಂತಲೂ ಹೆಚ್ಚಿನದ್ದಾಗಿದೆ.
ಭಾರತೀಯ ತಂತ್ರಜ್ಞಾನ ಕಂಪನಿಗಳು ಅಮೆರಿಕದಲ್ಲಿ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಉದ್ಯೋಗ ಒದಗಿಸಿವೆ ಎಂದು ಬುಧವಾರ ಬಿಡುಗಡೆಯಾದ ನಾಸ್ಕಾಂ ವರದಿ ತಿಳಿಸಿದೆ. ಭಾರತೀಯ ತಂತ್ರಜ್ಞಾನ ವಲಯ ಶೇಕಡ 75ಕ್ಕೂ ಅಧಿಕ ಫಾರ್ಚೂನ್ ಕಂಪನಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು ಆ ಪೈಕಿ ಬಹುತೇಕ ಸಂಸ್ಥೆಗಳ ಕೇಂದ್ರ ಕಚೇರಿಗಳು ಅಮೆರಿಕದಲ್ಲಿವೆ.
| ದೇಬಜಾನಿ ಘೋಷ್ ನಾಸ್ಕಾಂ ಅಧ್ಯಕ್ಷ
103 ಬಿಲಿಯನ್ ಡಾಲರ್
ಭಾರತೀಯ ಟೆಕ್ ಕೈಗಾರಿಕಾ ವಲಯ 2021ರಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಒದಗಿಸಿದ್ದವು. ಅದು ಸೃಷ್ಟಿಸಿದ ಆದಾಯ 103 ಬಿಲಿಯನ್ ಡಾಲರ್.