ನ್ಯೂಸ್

ಮಧ್ಯಪ್ರದೇಶ: ಫ್ಲೈಓವರ್‌ನಿಂದ ಉರುಳಿ ಬಿದ್ದ ಖಾಸಗಿ ಬಸ್; ಇಬ್ಬರು ಸಾವು, 40 ಮಂದಿಗೆ ಗಾಯ

ರಾಜಗಢ: ಇಂದು (ಮಂಗಳವಾರ) ಬೆಳಿಗ್ಗೆ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಖಾಸಗಿ ಬಸ್‌ವೊಂದು ಫ್ಲೈಓವರ್‌ನಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದು, 40 ಮಂದಿ ಗಾಯಗೊಂಡಿದ್ದಾರೆ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.

ಬಸ್ ಶಿವಪುರಿ ಜಿಲ್ಲೆಯ ಪಿಚೋರ್ ಪಟ್ಟಣಕ್ಕೆ ತೆರಳುತ್ತಿದ್ದಾಗ ಮಧ್ಯರಾತ್ರಿ 1.30 ರ ಸುಮಾರಿಗೆ ಪಚೋರ್ ಪಟ್ಟಣದ ಬಳಿ ಚಾಲಕನ ನಿಯಂತ್ರಣ ತಪ್ಪಿ ಫ್ಲೈಓವರ್‌ನಿಂದ ಕೆಳಗೆ ಬಿದ್ದಿದೆ ಎಂದು ಪಚೋರ್ ಪೊಲೀಸ್ ಠಾಣೆಯ ಉಸ್ತುವಾರಿ ಆಕಾಂಶಾ ಶರ್ಮಾ ಹೇಳಿದ್ದಾರೆ.

ಮೃತರಲ್ಲಿ ಒಬ್ಬನನ್ನು ಹರ್ಜತ್ ಸಿಂಗ್ (28) ಎಂದು ಗುರುತಿಸಲಾಗಿದೆ. ಇನ್ನೊಬ್ಬನ್ನು ಇನ್ನು ಪತ್ತೆ ಹಚ್ಚಲಾಗಿದೆ. ಗಾಯಗೊಂಡವರಲ್ಲಿ 19 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಇಂದೋರ್‌ಗೆ ಕಳುಹಿಸಲಾಗಿದೆ. ಉಳಿದವರು ಶಾಜಾಪುರ, ಬಯೋರಾ ಮತ್ತು ಪಚೋರ್‌ನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಇನ್ನು ಈ ಘಟನೆ ನಡೆದ ಸಮಯದಲ್ಲಿ ಚಾಲಕ ಮತ್ತು ಕಂಡಕ್ಟರ್‌ ಸ್ಥಳದಿಂದ ಪರಾರಿಯಾಗಿದ್ದಾರೆ. ಅವರನ್ನು ಪತ್ತೆ ಮಾಡಲು ಶೋಧ ಕಾರ್ಯ ನಡೆಯುತ್ತಿದೆ ಎಂದು ಹೇಳಲಾಗಿದೆ. ಇಬ್ಬರ ವಿರುದ್ಧವು ಪ್ರಕರಣ ದಾಖಲಿಸಲಾಗಿದೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ವಾಹನ ಕೆಳಗಡೆ ನೆಲಕ್ಕೆ ಉರುಳಿ ಬಿದ್ದಿದೆ ಎಂದು ಪಚೋರ್ ಪೊಲೀಸ್ ಠಾಣೆಯ ಉಸ್ತುವಾರಿ ಆಕಾಂಶಾ ಶರ್ಮಾ ತಿಳಿಸಿದ್ದಾರೆ.