ನ್ಯೂಸ್

ಮೀನುಗಾರಿಕಾ ಕಾಲೇಜ್ ಆವರಣದಲ್ಲಿ ಶಾಸನ ಪತ್ತೆ

reportermng

ಅಳುಪರ ಶಾಸನ ಹಳಗನ್ನಡದಲ್ಲಿದ್ದರೆ ಪೋರ್ಚುಗೀಸ್ ಶಾಸನ ಆಂಗ್ಲ ಲಿಪಿಯಲ್ಲಿ ಇದೆ.

ಮೈಸೂರಿನ ಪುರಾತತ್ತ್ವ ಇಲಾಖೆ ತಜ್ಞರು ಆಗಮಿಸಿದ್ದು ಶಾಸನಗಳ ಕಾರ್ಬನ್ ಕಾಪಿ ಮಾಡಿಕೊಂಡು ಅಧ್ಯಯನ ನಡೆಸುತ್ತಿದ್ದಾರೆ.

ಮಂಗಳೂರಿನ ಹೊಯ್ಗೆ ಬಜಾರಿನಲ್ಲಿರುವ ಮೀನುಗಾರಿಕಾ ಸಂಶೋಧನಾ ಕೇಂದ್ರದ ಆವರಣದಲ್ಲಿ ಇರುವ ಹಳೇಯ ತರಬೇತಿ ಕೇಂದ್ರವನ್ನು ನೆಲಸಮ ಗೊಳಿಸಿ ಹೊಸ ಕಟ್ಟಡ ನಿರ್ಮಿಸಲು ಕೆಲಸ ಮಾಡುವ ವೇಳೆ ಇದು ಪತ್ತೆಯಾಗಿದೆ.

ಒಂದು 8ನೇ ಶತಮಾನದ ಆಳುಪ ಅರಸರ ಕಾಲದ ಶಾಸನ ಹಾಗೂ ಇನ್ನೊಂದು 10ನೇ ಶತಮಾನದ ಕಾಲದ ಪೋರ್ಚುಗೀಸರ ಶಾಸನ ಎಂದು ತಿಳಿದುಬಂದಿದೆ.

ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಆವರಣದಲ್ಲಿ ಪ್ರಾಚೀನ ಶಾಸನಗಳೆರಡು ಪತ್ತೆಯಾಗಿವೆ.

ಮಂಗಳೂರು