ನ್ಯೂಸ್

ಫುಡ್​ ಡೆಲಿವರಿ ಬಾಯ್​ ವೇಷದಲ್ಲಿ ಡ್ರಗ್​ ಮಾರಾಟ: ಇಬ್ಬರು ಪೆಡ್ಲರ್​ಗಳ ಬಂಧನ

ಬೆಂಗಳೂರು: ಫುಡ್​ ಡೆಲಿವರಿ ಬಾಯ್​ ವೇಷದಲ್ಲಿ ಡ್ರಗ್​ ಮಾರಾಟ ಮಾಡುತ್ತಿದ್ದ ಪೆಡ್ಲರ್​ಗಳನ್ನು ಸಿಸಿಬಿ ಪೊಲೀಸರು ಬಧಿಸಿದ್ದಾರೆ.

ಅಭಿಜಿತ್ ಮತ್ತು ಶಿಬು ಬಂಧಿತ ಆರೋಪಿಗಳು. ಸಿಸಿಬಿ ಪೊಲೀಸರ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಆರೋಪಿಗಳಿಬ್ಬರು ಸಿಕ್ಕಿಬಿದ್ದಿದ್ದಾರೆ. ಸ್ವಿಗ್ಗಿ ಮತ್ತು ಝೊಮಾಟೋ ಫುಡ್​ ಡೆಲಿವರಿ ಬಾಯ್ ವೇಷದಲ್ಲಿ ಅಭಿಜಿತ್ ಡ್ರಗ್ಸ್ ಸಾಗಾಟ ಮಾಡುತ್ತಿದ್ದ.

ನೈಜೀರಿಯಾ ಮೂಲದ ವ್ಯಕ್ತಿಯಿಂದ ಡ್ರಗ್ಸ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಇಬ್ಬರು ಆರೋಪಿಗಳಿಂದ 9 ಲಕ್ಷ ಮೌಲ್ಯದ ವಿವಿಧ ರೀತಿಯ ಸಿಂಥೆಟಿಕ್ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.