ನ್ಯೂಸ್

ಗ್ರಾಹಕರಿಗೆ 2 ದಿನ ಉಚಿತ ಹೇರ್ ಕಟಿಂಗ್ ಮಾಡಿ ಅಭಿಮಾನ ಮೆರೆದ ಅಪ್ಪು ಅಭಿಮಾನಿ!

ತುಮಕೂರು: ಚಂದನವನದ ರಾಜಕುಮಾರ, ಕೋಟ್ಯಂತರ ಜನರ ಪ್ರೀತಿಯ ಅಪ್ಪು ಅಭಿನಯದ 'ಗಂಧದಗುಡಿ' ಸಾಕ್ಷ್ಯಚಿತ್ರ ನಾಳೆ(ಅ.28) ರಾಜ್ಯಾದ್ಯಂತ ತೆರೆ ಕಾಣಲಿದ್ದು, ಈ ಹಿನ್ನೆಲೆ ಅಪ್ಪು ಅಭಿಮಾನಿಯೊಬ್ಬರು ಗ್ರಾಹಕರಿಗೆ ಉಚಿತ ಹೇರ್ ಕಟಿಂಗ್ ಮಾಡಿದ್ದಾರೆ.

ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಕೆಜಿ ಟೆಂಪಲ್ ಗ್ರಾಮದ ಯುವಕ ಪವನ್​ಗೆ ಪುನೀತ್​ ರಾಜ್​ಕುಮಾರ್​ ಅಂದ್ರೆ ತುಂಬಾ ಇಷ್ಟ. ಹಾಗಾಗಿ ತನ್ನ ಶಾಪ್​ಗೆ ಮಂಗಳವಾರ, ಬುಧವಾರ ಗ್ರಾಹಕರಿಗೆ ಉಚಿತವಾಗಿ ಹೇರ್ ಕಟಿಂಗ್ ಮಾಡಿ ಅಭಿಮಾನ ಮೆರೆದಿದ್ದಾರೆ.

ಕೆಜಿ ಟೆಂಪಲ್ ಗ್ರಾಮದಲ್ಲಿ ತನ್ನ ಸಹೋದರಿಯ ಹೆಸರಿನಲ್ಲಿ ಪವನ್​ ಹೇರ್ ಕಟಿಂಗ್ ಸಲೂನ್ ತೆರೆದಿದ್ದಾರೆ. ಇದೇ ಸಲೂನ್​ನಲ್ಲಿ ಉಚಿತ ಸೇವೆ ನೀಡಿದ್ದಾರೆ. ಪವನ್ ಕಾರ್ಯಕ್ಕೆ ಮನೆಯವರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿ ವರ್ಷ ಅಪ್ಪು ಪುಣ್ಯಸ್ಮರಣೆಯ ವೇಳೆ ಉಚಿತ ಹೇರ್ ಕಟಿಂಗ್ ಸೇವೆ ನೀಡುವುದಾಗಿ ಪವನ್​ ಹೇಳಿದ್ದಾರೆ.