ರಾಯ್‌ಪುರ: ಛತ್ತೀಸ್‌ಗಢದ ಬಲರಾಮಪುರ ಜಿಲ್ಲೆಯಲ್ಲಿ ಮಿನಿ ಗೂಡ್ಸ್ ವಾಹನವೊಂದು ಕಣಿವೆಗೆ ಉರುಳಿ ಛತ್ತೀಸ್‌ಗಢ ಸಶಸ್ತ್ರ ಪಡೆ (ಸಿಎಎಫ್) ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಾಹನವು ಕಡಿದಾದ ತಿರುವಿನಲ್ಲಿ ಚಲಿಸುವಾಗ ಚಾಲಕನ ನಿಯಂತ್ರಣ ತಪ್ಪಿ ಆಳವಾದ ಕಣಿವೆಗೆ ಉರುಳಿದೆ. ಈ ವೇಳೆ ಕಾನ್ಸ್ಟೆಬಲ್ಗಳಾದ ಉತ್ತರ ಪ್ರದೇಶದ ನಿವಾಸಿ, ಹೆಡ್ ಕಾನ್‌ಸ್ಟೆಬಲ್ ಫತೇಹ್ ಬಹದ್ದೂರ್ ಮತ್ತು ಛತ್ತೀಸ್‌ಗಢದ ಸುರ್ಗುಜಾ ಜಿಲ್ಲೆಯ ನಾರಾಯಣ ಪ್ರಸಾದ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಾಹನದಲ್ಲಿದ್ದ ಮತ್ತೊಬ್ಬ ಕಾನ್ಸ್ಟೇಬಲ್ ರಾಪ್ರತಾಪ್ ಸಿಂಗ್ ಹಾಗೂ ವಾಹನ ಚಾಲಕನಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಲರಾಮ್‌ಪುರ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಲಾಲ್ ಉಮೇದ್ ಸಿಂಗ್ ಹೇಳಿದ್ದಾರೆ.
ಸಿಎಎಫ್‌ನ 10ನೇ ಬೆಟಾಲಿಯನ್‌ನ 'ಡಿ' ಕಂಪನಿಯನ್ನು ರಾಮಚಂದ್ರಾಪುರದಿಂದ ಪುಂಡಗ್‌ಗೆ ವರ್ಗಾಯಿಸಲಾಗಿದೆ ಎಂದು ಎಸ್‌ಪಿ ಸಿಂಗ್ ಹೇಳಿದ್ದಾರೆ. ಮರುನಿಯೋಜನೆಯ ಭಾಗವಾಗಿ ಹೊಸ ಶಿಬಿರದ ಸ್ಥಳಕ್ಕೆ ಬಸ್‌ಗಳು ಮತ್ತು ಟ್ರಕ್‌ಗಳಲ್ಲಿ ಭದ್ರತಾ ಸಿಬ್ಬಂದಿ, ಸರಕುಗಳು ಮತ್ತು ಇತರ ವಸ್ತುಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ಅವರು ಹೇಳಿದರು.