oplus_2 
ನ್ಯೂಸ್

19ರಂದು ಛತ್ರಪತಿ ಶಿವಾಜಿ ಮಹಾರಾಜರ,20ರಂದು ಕವಿ ಸರ್ವಜ್ಞ ಜಯಂತಿ

ಚಿತ್ರದುರ್ಗ: ಜಿಲ್ಲಾ ಕೇಂದ್ರದಲ್ಲಿ ಸರ್ಕಾರದಿಂದ ಫೆ.19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಾಗೂ 20ರಂದು ಸಂತ ಕವಿ ಸರ್ವಜ್ಞ ರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು ಎಂದು ಎಡಿಸಿ ಬಿ.ಟಿ.ಕುಮಾರಸ್ವಾಮಿ ಹೇಳಿದರು. ಜಯಂತಿ ಆಚರಣೆ ಸಂಬಂಧ ಡಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ,ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು 19 ರಂದು ಬೆಳಗ್ಗೆ 11ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ಹಾಗೂ ಸಂತ ಕವಿ ಸರ್ವಜ್ಞ ಜಯಂತಿಯನ್ನು 20ರಂದು ಬೆಳಗ್ಗೆ 11ಕ್ಕೆ ಡಿಸಿ ಕಚೇರಿಯಲ್ಲಿ ಅಚರಿಸಲು ಸಮಾಜದ ಮುಖಂಡರು ಸಲಹೆ ನೀಡಿದರು. ಇದಕ್ಕೆ ಸಮ್ಮತಿಸಿದ ಎಡಿಸಿ ಮಹನೀಯರ ಕುರಿತು ಗೀತಗಾಯನ ಹಾಗೂ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ, ಜಿಲ್ಲಾ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜೆ.ಸುರೇಶ್‌ಜಾಧವ್,ಕಾರ‌್ಯದರ್ಶಿ ಜೆ.ಗೋಪಾಲರಾವ್,ಜೀಜಾಮಾತಾ ಮಹಿಳಾ ಸಂಘದ ಅಧ್ಯಕ್ಷೆ ಜಿ.ಉಷಾಬಾಯಿ ಜಾಧವ್,ಮುಖಂ ಡರಾದ ಚಂದ್ರೋಜಿರಾವ್ ಜಾಧವ್,ಲಕ್ಷ್ಮಣರಾವ್,ವಿದ್ಯಾನಂದಲಾಡ್, ಕೃಷ್ಣಾಜಿರಾವ್ ಮೊರೆ, ದತ್ತೋಭರಾವ್ ಜಾದವ್,ಸರ್ಯ ನಾರಾಯಣ,ಕುಂಬಾರ ಮಹಿಳಾ ಮಹಾಸಭಾದ ಅಧ್ಯಕ್ಷೆ ಬೈಲಮ್ಮ,ಜಿಲ್ಲಾ ಕುಂಬಾರ ಸಂಘದ ಅಧ್ಯಕ್ಷ ಯರ‌್ರಿಸ್ವಾಮಿ, ಕುಂಬಾರ ಗುಂಡ ಯ್ಯ ಮಠದ ಕಾರ‌್ಯದರ್ಶಿ ಮೃತ್ಯುಂಜಯ, ನಿರ್ದೇಶಕ ರಮೇಶ್,ಅನ್ನಪೂರ್ಣ, ನಾರಾಯಣ್ ಮತ್ತಿತರರು ಇದ್ದರು.