ಲಂಡನ್: ಇತ್ತೀಚಿಗೆ ಲಂಡನ್ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 1950ರ ದಶಕದ ಭಾರತೀಯ ಕರೆನ್ಸಿ ನೋಟು ಬರೊಬ್ಬರಿ 56 ಲಕ್ಷ ರೂ.ಗೆ ಮಾರಾಟವಾಗಿದೆ.
ಹೌದು, ಈ ಹಜ್ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ 1950ರಲ್ಲಿ ಬಿಡುಗಡೆ ಮಾಡಿದೆ. ಹರಾಜದ ನೋಟು HA 078400 ಸಂಖ್ಯೆ(ಸಿರಿಸ್) ಹೊಂದಿದೆ. 20ನೇ ಶತಮಾನದ ಮಧ್ಯ ಭಾಗದಲ್ಲಿ ಆರ್ಬಿಐ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಿಗೆ ಹಜ್ ಯಾತ್ರೆಗೆ ತೆರಳುವ ಪ್ರಯಾಣಿಕಾರಿಗಾಗಿ ಈ ನೋಟುಗಳನ್ನು ತಯಾರಿಸಲಾಗಿತ್ತು. ಇದರಿಂದ ನಿಯಮಿತ ಭಾರತೀಯ ಕರೆನ್ಸಿ ಬಳಸಿ ಆಕ್ರಮವಾಗಿ ಚಿನ್ನ ಖರೀದಿ ಮಾಡುವುದನ್ನು ತಡೆಯುವ ಇದರ ಮೂಲ ಉದ್ದೇಶವಾಗಿತ್ತು.
ಈ 100 ರೂ. ನೋಟಿನ ಮೇಲೆ HA ಎಂದು ನಮೂದಿಸಲಾಗಿದೆ. HA ಎಂದು ಈ ಹಿಂದೆ ಯಾವುದೇ ನೋಟುಗಳಿಗೆ ಮುದ್ರಣ ಮಾಡಿಲ್ಲ. ಬೇರೆ ನೋಟುಗಳಿಂದ ಈ ಕರೆನ್ಸಿಯನ್ನು ಸುಲಭವಾಗಿ ಗುರುತಿಸಬಹುದು. ಅಲ್ಲದೆ, ಸಾಮಾನ್ಯ ನೋಟುಗಳಿಗಿಂತ ಇದು ಕೆಂಪು ಬಣ್ಣದಿಂದ ಕೂಡಿದ್ದು, ನೋಡಲು ವಿಭಿನ್ನವಾಗಿ ಕಾಣುತ್ತದೆ.
ಇದನ್ನೂ ಓದಿ: ಆ ದಿನ ವಿಶಾಲ್ ಡೆಂಗ್ಯೂನಿಂದ ಬಳಲುತ್ತಿದ್ದನು..ಅದಕ್ಕೇ ನಡುಗಿದನು: ನಟಿ ಖುಷ್ಬೂ.. Vishal Health Condition
ಯುನೆಟೆಡ್ ಅರಬ್ ಎಮಿಟರ್ಸ್, ಕತಾರ್, ಬಹ್ರೇನ್, ಕುವೈತ್ ಮತ್ತು ಒಮನ್ಗಳಂತ ಗಲ್ಫ್ ದೇಶಗಳಲ್ಲಿ ಕಾನೂನು ಬದ್ಧ ಟೆಂಡರ್ ಆಗಿದ್ದರೂ, ನಮ್ಮ ದೇಶದಲ್ಲಿ(ಭಾರತ) ಬಳಕೆಗೆ ಅನುಮತಿ ಆರ್ಬಿಐ ಕೊಟ್ಟಿರಲಿಲ್ಲ.
ಹಜ್ ಯಾತ್ರೆಗಳಿಗೆ ಆರಂಭಿಸಿದ ಈ ನೋಟ್ಗಳನ್ನು 1970ರ ಸುಮಾರನಲ್ಲಿ ಸಂಪೂರ್ಣ ಬಂದ್ ಮಾಡಲಾಯಿತು. ಕಾರಣ ಕುವೈತ್ ರಾಷ್ಟ್ರ ತನ್ನದೆ ಆದ ಕರೆನ್ಸಿ ದೇಶಕ್ಕೆ ಪರಿಚಯಿಸಿತು. ಇದೇ ರೀತಿ ಗಲ್ಫ್ ರಾಷ್ಟ್ರಗಳು ಕೂಡ ತಮ್ಮದೇ ಆದ ನೋಟ್ಗಳನ್ನು ಚಲಾವಣೆಗೆ ತಂದರು. ಇದರಿಂದ ನಮ್ಮ ದೇಶದ ವಿಶೇಷ ಹಜ್ ಕರೆನ್ಸಿಯ ಬಳಕೆ ಕ್ರಮೇಣ ಕಡಿಮೆಯಾಯಿತು. ಹೀಗಾಗಿ, ಭಾರತ ಸರ್ಕಾರ ಈ ನೋಟ್ಗಳನ್ನು ಬಂದ್ ಮಾಡಿತು.(ಏಜೆನ್ಸೀಸ್).