ಶೃಂಗೇರಿ: ಪಟ್ಟಣದ ಸಾರ್ವಜನಿಕ ಶ್ರೀ ಮಹಾಗಣಪತಿ ಸೇವಾ ಸಮಿತಿ ಅಯೋಜಿಸುವ 64ನೇ ಸಾರ್ವಜನಿಕ ಗಣೇಶೋತ್ಸವ ಸೆ.18 ರಿಂದ ಸೆ.24ರವರೆಗೆ ಪಪಂನ ಡಾ.ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ನೆರವೇರಲಿದೆ.
ಸೆ.18ರ ಬೆಳಗ್ಗೆ ಶ್ರೀ ಮಹಾಗಣಪತಿ ಪ್ರತಿಷ್ಠಾಪನೆ ನಡೆಯಲಿದೆೆ. 23ರ ಬೆಳಗ್ಗೆ ಗಣಹೋಮ, ಏಕನಾರಿಕೇಳ ಗಣಹೋಮದ ಬಳಿಕ ಪೂರ್ಣಾಹುತಿ ನಡೆಯಲಿದೆ.
ಪ್ರತಿದಿನ ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಲಿದೆ. ಸೆ.18ಕ್ಕೆ ಶ್ರೀ ಭಾರತೀತೀರ್ಥ ಭಜನಾ ಮಂಡಳಿಯ ಐ.ಬಿ.ಹರೀಶ್ ಹಾಗೂ ಸಂಗಡಿಗರಿಂದ ಭಜನಾ ಕಾರ್ಯಕ್ರಮ, 19ರಂದು ಆಯ್ದ ಹಿರಿಯ ಪ್ರಾಥಮಿಕ-ಪ್ರೌಢಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ ತ್ರಿಬ್ಬಲ್ ಧಮಾಕಾ, 20ಕ್ಕೆ ಯಕ್ಷಗಾನ ಕಲಾವಿದ ನಾಗೇಶ್ ಕಾಮತ್ ಅವರ ಪ್ರಾಯೋಜಕತ್ವದಲ್ಲಿ ಹೊನ್ನವಳ್ಳಿ ವೆಂಕಟೇಶ್ವರ ಯಕ್ಷಗಾನ ಕಲಾ ಮಂಡಳಿಯಿಂದ ಪೌರಾಣಿಕ ಯಕ್ಷಗಾನ ಪ್ರಸಂಗ, 21ರಂದು ಮಂಗಳೂರು ಶಿವಾನಿ ಮ್ಯೂಸಿಕಲ್ಸ್ ಅವರ ಅರ್ಕೆಸ್ಟ್ರಾ, 22 ರಂದು ಮಂಗಳೂರು ಶ್ವೇತಾ ಅರೆಹೊಳೆ ನಿರ್ದೇಶನದ ನೃತ್ಯ ವೈಭವ, 23ರಂದು ನಾಗಪ್ಪಶೇಟ್ ಅವರ ಪ್ರಾಯೋಜಕತ್ವದಲ್ಲಿ ಉಡುಪಿ ಸ್ಮಾರ್ಟ್‌ಗಾಯ್ಸಾ ಡ್ಯಾನ್ಸ್ ಅಕಾಡೆಮಿ ಅವರಿಂದ ಸ್ಮಾರ್ಟ್‌ಡ್ಯಾನ್ಸ್ ನಡೆಯಲಿದೆ.
24ರಂದು ಸಂಜೆ 4 ಗಂಟೆಗೆ ಪಟ್ಟಣದ ಮುಖ್ಯಬೀದಿಯಲ್ಲಿ ಶೋಭಾಯಾತ್ರೆಯ ಮೂಲಕ ತುಂಗಾನದಿಯಲ್ಲಿ ಮಹಾಗಣಪತಿ ವಿಸರ್ಜನೆ ನಡೆಯಲಿದೆ.